ಕರಾವಳಿ ವಾಯ್ಸ್ ನ್ಯೂಸ್
ಕಾರವಾರ:ಬೈಕ್ ಓಡಿಸುವ ನೆಪದಲ್ಲಿ ಕರ್ಕಶ ಶಬ್ದದ ಮೂಲಕ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದ ಸವಾರರಿಗೆ ಕಾರವಾರ ಸಂಚಾರಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ನಗರ ವ್ಯಾಪ್ತಿಯಲ್ಲಿ ಶನಿವಾರ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು, ಅತಿಯಾದ ಶಬ್ದ ಹೊರಸೂಸುವ ಮೋಡಿಫೈಡ್ ಸೈಲೆನ್ಸರ್ ಅಳವಡಿಸಿದ್ದ ನಾಲ್ಕು ಬೈಕ್ಗಳನ್ನು ವಶಕ್ಕೆ ಪಡೆದು, ಸೈಲೆನ್ಸರ್ಗಳನ್ನು ತೆರವುಗೊಳಿಸಿದ್ದಾರೆ.

ಬೈಕ್ನ ವೇಗಕ್ಕಿಂತ ಶಬ್ದವನ್ನೇ ಸ್ಟೈಲ್ ಎಂದುಕೊಂಡ ಯುವಕರ ಹುಚ್ಚಾಟಕ್ಕೆ ಕಡಿವಾಣ ಹಾಕಲು ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಇಂತಹ ಬೈಕ್ಗಳ ವಿರುದ್ಧ ಕ್ರಮ ಮುಂದುವರಿದಿದೆ.
ಕಾರವಾರ ಸಂಚಾರಿ ಠಾಣೆಯ ಪಿಎಸ್ಐಗಳಾದ ಶ್ರೀಕಾಂತ ರಾಥೋಡ್ ಹಾಗೂ ಪರುಷರಾಮ್ ಸೊಲ್ಲಾಪುರಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಡಿ. ಶ್ರೀಶೈಲ್, ಬೆನಕ ನಾಯಕ, ಪ್ರವೀಣ ಪಿ. ಹಾಗೂ ನಾಗಪ್ಪ ಗೌಡ ಪಾಲ್ಗೊಂಡಿದ್ದರು.


