ಕರಾವಳಿ ವಾಯ್ಸ್ ನ್ಯೂಸ್ 

ಭಟ್ಕಳ: ರಾಷ್ಟ್ರೀಯ ಹೆದ್ದಾರಿ-66ರ ಪಕ್ಕದ ಸರ್ವಿಸ್ ರಸ್ತೆಯಲ್ಲಿ ನಿಲ್ಲಿಸಿದ್ದ ಟ್ರಾವೆಲರ್ ಮಿನಿ ಬಸ್‌ವೊಂದು ಕಳವಾಗಿರುವ ಘಟನೆ ತಾಲೂಕಿನ ಮಣ್ಣುಳಿಯಲ್ಲಿ ನಡೆದಿದೆ.

Banner Ad

ಭಟ್ಕಳ ನಿವಾಸಿ ಕೃಷ್ಣ ತಂದೆ ಅನಂತ ನಾಯ್ಕ (35) ಅವರಿಗೆ ಸೇರಿದ ಬಿಳಿ ಬಣ್ಣದ ಕೆಎ-47/7838 ನೋಂದಣಿ ಸಂಖ್ಯೆಯ ಟ್ರಾವೆಲರ್ ಮಿನಿ ಬಸ್‌ನ್ನು ಮಣ್ಣುಳಿ ಬಳಿ ಸರ್ವಿಸ್ ರಸ್ತೆಯಲ್ಲಿ ನಿಲ್ಲಿಸಲಾಗಿತ್ತು. ಸೆ.27ರ ಬೆಳಗ್ಗೆ 11ರಿಂದ ಸೆ.28ರ ಮಧ್ಯಾಹ್ನ 12.30ರ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ವಾಹನ ಕಳವಾಗಿರುವುದು ಗಮನಕ್ಕೆ ಬಂದ ಬಳಿಕ ಕೃಷ್ಣ ಅವರು ಭಟ್ಕಳ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಕಳವಾದ ಮಿನಿ ಬಸ್ ಪತ್ತೆಹಚ್ಚಿ, ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

 

Please Share: