ಕರಾವಳಿ ವಾಯ್ಸ್ ನ್ಯೂಸ್

ಹೊನ್ನಾವರ, ಏಪ್ರಿಲ್ 20: ಮೀನು ಹಿಡಿಯಲು ತೆರಳಿದ್ದ ವ್ಯಕ್ತಿಯೊಬ್ಬರು ಕಾಲು ಜಾರಿ ನದಿಗೆ ಬಿದ್ದು ಮೃತಪಟ್ಟ ದುರ್ಘಟನೆ ತಾಲೂಕಿನ ಕರ್ಕಿಕೋಡಿಯಲ್ಲಿ ಸಂಭವಿಸಿದೆ.

Banner Ad

ಮೃತರನ್ನು ಹೊನ್ನಾವರ ತಾಲೂಕಿನ ಬಾಂದೆಹಳ್ಳ ಗ್ರಾಮದ ನಿವಾಸಿ ಗಣಪತಿ ಬಾಲಕೃಷ್ಣ ಜಾಧವ್ (45) ಎಂದು ಗುರುತಿಸಲಾಗಿದೆ. ಇವರು ಖಾಸಗಿ ಕೊರಿಯರ್ ಕಚೇರಿಯಲ್ಲಿ ಉದ್ಯೋಗಿಯಾಗಿದ್ದರು.

ದೂರಿನ ಪ್ರಕಾರ, ಗಣಪತಿ ಅವರು ಕರ್ಕಿಕೋಡಿ ಸಮೀಪ ಹರಿಯುವ ಶರಾವತಿ ನದಿಗೆ ಮೀನು ಹಿಡಿಯಲು ತೆರಳಿದ್ದರು. ಈ ವೇಳೆ ಅಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದ ಅವರು, ನೀರಿನ ತೀವ್ರ ಸೆಳೆತಕ್ಕೆ ಸಿಲುಕಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಮೃತರ ಸಹೋದರ ಹಾಗೂ ಆಟೋ ಚಾಲಕರಾದ ಈಶ್ವರ ಬಾಲಕೃಷ್ಣ ಜಾಧವ್ ಅವರು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಸ್ಥಳೀಯರು ಮೃತರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

 

Please Share: