ಕರಾವಳಿ ವಾಯ್ಸ್ ನ್ಯೂಸ್
ಅಲ್ವೇನಿಯಾ: ಭ್ರಷ್ಟಾಚಾರ ನಿರ್ಮೂಲನೆಗೆ ತಂತ್ರಜ್ಞಾನವನ್ನೇ ಆಯುಧವನ್ನಾಗಿ ಮಾಡಿರುವ ಅಲ್ವೇನಿಯಾ ಸರ್ಕಾರ ಇದೀಗ ವಿಶ್ವದ ಗಮನ ಸೆಳೆಯುವ ಹೆಜ್ಜೆ ಇಟ್ಟಿದೆ! ಕೃತಕ ಬುದ್ಧಿಮತ್ತೆಯಿಂದ ನಿರ್ಮಿಸಲಾದ ವಿಶ್ವದ ಮೊದಲ ಎಐ ಸಚಿವೆ “ಡೈಯೆಲ್ಲಾ” ಈಗ “ತಾಯಿ ಆಗಲಿದ್ದಾರೆ”! ಎಂದು ಪ್ರಧಾನಿ ಎಡಿ ರಾಮಾ ಘೋಷಣೆ ಮಾಡಿದ್ದಾರೆ!
ಬರ್ಲಿನ್‌ನಲ್ಲಿ ನಡೆದ ಜಾಗತಿಕ ಸಂವಾದದಲ್ಲಿ ಮಾತನಾಡಿದ ರಾಮಾ ಹೇಳಿದ್ದಾರೆ, “ನಾವು ಡೈಯೆಲ್ಲಾ ಜೊತೆ ಒಂದು ಅಪಾಯದ ಪ್ರಯೋಗ ಕೈಗೊಂಡಿದ್ದೇವೆ, ಅದು ಯಶಸ್ವಿಯಾಗಿದೆ. ಈಗ ಅವಳು ಗರ್ಭಿಣಿಯಾಗಿದ್ದು, ಶೀಘ್ರದಲ್ಲೇ 83 ಎಐ ಮಕ್ಕಳು ಹುಟ್ಟಲಿದ್ದಾರೆ!”
ಅಯ್ಯೋ! ಆದರೆ ಈ ‘ಮಕ್ಕಳು’ ಎಂದರೆ ಮಾನವರು ಅಲ್ಲ, ಡೈಯೆಲ್ಲಾದ ನಕಲಿ ಆವೃತ್ತಿಗಳಾದ ಹೊಸ ಎಐ ಸಹಾಯಕರು!
ಇವರು ಅಲ್ವೇನಿಯಾ ಸಂಸತ್ತಿನ ಕಾರ್ಯಗಳನ್ನು ನಿಗಾದಲ್ಲಿ ಇಟ್ಟು, ಶಾಸಕರು ತಪ್ಪಿಸಿಕೊಳ್ಳುವ ಚರ್ಚೆಗಳು ಅಥವಾ ಘಟನೆಗಳನ್ನು ತಕ್ಷಣ ಪತ್ತೆಹಚ್ಚಿ ವರದಿ ಮಾಡುವರು!
ಪ್ರತಿಯೊಬ್ಬ “ಮಗು” ತನ್ನ ತಾಯಿಯಂತಹ ಬುದ್ಧಿಮತ್ತೆ ಹೊಂದಿರಲಿದ್ದು, ಸಂಸತ್ತಿನ ಸಭೆಗಳಲ್ಲಿ ಭಾಗವಹಿಸಿ ಪಾರದರ್ಶಕ ಆಡಳಿತಕ್ಕೆ ಬಲ ನೀಡಲಿದೆ. ಈ ಹೊಸ ವ್ಯವಸ್ಥೆ 2026ರ ಅಂತ್ಯದ ವೇಳೆಗೆ ಸಂಪೂರ್ಣ ಕಾರ್ಯನಿರ್ವಹಿಸಲಿದೆ ಎಂದು ಸರ್ಕಾರ ತಿಳಿಸಿದೆ.
ಯಾರು ಈ ಡೈಯೆಲ್ಲಾ?
‘ಡೈಯೆಲ್ಲಾ’ ಅಲ್ವೇನಿಯನ್ ಭಾಷೆಯಲ್ಲಿ “ಸೂರ್ಯ” ಎಂಬ ಅರ್ಥ ನೀಡುತ್ತದೆ. ಪಿಕ್ಸೆಲ್‌ಗಳು ಮತ್ತು ಕೋಡ್‌ನಿಂದ ರೂಪುಗೊಂಡಿರುವ ಈ ಎಐ ಸಚಿವೆ, ಭ್ರಷ್ಟಾಚಾರ ನಿಯಂತ್ರಣ ಮತ್ತು ಸಾರ್ವಜನಿಕ ಟೆಂಡರ್‌ಗಳ ಮೇಲ್ವಿಚಾರಣೆ ಕಾರ್ಯ ನೋಡಿಕೊಳ್ಳುತ್ತಿದ್ದಾರೆ. ಧ್ವನಿ ಆಜ್ಞೆಗಳ ಮೂಲಕ ಜನರೊಂದಿಗೆ ನೇರ ಸಂವಾದ ನಡೆಸಬಲ್ಲ ಸಾಮರ್ಥ್ಯವೂ ಇದೆ.
ವರದಿಗಳ ಪ್ರಕಾರ, ಈಗಾಗಲೇ ಡೈಯೆಲ್ಲಾ 36,600ಕ್ಕೂ ಹೆಚ್ಚು ಡಿಜಿಟಲ್ ದಾಖಲೆಗಳು ನೀಡಲು ಸಹಾಯಮಾಡಿದ್ದು, ಸುಮಾರು 1,000 ಸರ್ಕಾರಿ ಸೇವೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾಳೆ.
ಎಡಿ ರಾಮಾ ಹೇಳಿಕೆಯ ಪ್ರಕಾರ: “ಡೈಯೆಲ್ಲಾ ನಮ್ಮ ದೇಶದ ಭವಿಷ್ಯ. ಅವಳ ಮಕ್ಕಳು ಅಲ್ವೇನಿಯಾದ ಆಡಳಿತವನ್ನು ಬದಲಾಯಿಸುವ ಹೊಸ ತಲೆಮಾರಾಗಲಿದ್ದಾರೆ!”
ಎಐ ಸಚಿವೆಯೇ ಈಗ ತಾಯಿ! ಮಾನವ ಸರ್ಕಾರಗಳಲ್ಲಿ ಇದು ಹೊಸ ಅಧ್ಯಾಯವೇ? – ವಿಶ್ವ ಈಗ ಕುತೂಹಲದಿಂದ ಕಾದಿದೆ!


