ಕರಾವಳಿ ವಾಯ್ಸ್ ನ್ಯೂಸ್

ಕಾರವಾರ: “ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ನಮ್ಮ ಸಿದ್ದಾಪುರ ತಾಲೂಕಿನ ತಂಟೆಗೆ ಬರಬಾರದು,” ಎಂದು ಕರಾವಳಿ ಕನ್ನಡ ಸಂಘದ ಭಾಸ್ಕರ ಪಟಗಾರ ಎಚ್ಚರಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಜಿಲ್ಲೆಯ ವಿಚಾರದಲ್ಲಿ ತಲೆಹಾಕುವುದು ಸೂಕ್ತವಲ್ಲ. ನಮ್ಮ ತಾಲೂಕನ್ನು ಸೇರಿಸಿಕೊಂಡು ಹೊಸ ಜಿಲ್ಲೆ ರೂಪಿಸುವ ಪ್ರಯತ್ನ ನಡೆಯುತ್ತಿದೆ ಎನ್ನುವುದು ಸ್ಪಷ್ಟವಾಗುತ್ತಿದೆ. ಇಂತಹ ಕ್ರಮಗಳು ಕರಾವಳಿಯ ಏಕತೆಯನ್ನು ಧ್ವಂಸಗೊಳಿಸುವಂತಿವೆ,” ಎಂದು ಕಿಡಿಕಾರಿದರು.

“ಸಿದ್ದಾಪುರವನ್ನು ಸಾಗರಕ್ಕೆ ಸೇರಿಸಲು ನಡೆಸುತ್ತಿರುವ ರಾಜಕೀಯ ಯತ್ನಕ್ಕೆ ಜಿಲ್ಲೆಯ ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಅವರಿಗೆ ಪತ್ರ ಬರೆಯಲಾಗಿದೆ. ನಮ್ಮ ಸಿದ್ದಾಪುರ ತಾಲೂಕು ಉತ್ತರ ಕನ್ನಡದ ಅವಿಭಾಜ್ಯ ಅಂಗವಾಗಿದ್ದು, ಅದನ್ನು ಬೇರ್ಪಡಿಸಲು ನಾವು ಬಿಡುವುದಿಲ್ಲ,” ಎಂದು ಭಾಸ್ಕರ ಪಟಗಾರ ಸ್ಪಷ್ಟಪಡಿಸಿದರು.

ಕರಾವಳಿಯ ಒಗ್ಗೂಟವನ್ನು ಹಾಳುಮಾಡುವ ಪ್ರಯತ್ನಗಳು ನಡೆದರೆ, ಅಂತಹವರನ್ನು ಒಕ್ಕೂಟದಿಂದ ದೂರವಿಡಬೇಕೆಂದು ಅವರು ಎಚ್ಚರಿಸಿದರು.

 

Please Share: