ಕರಾವಳಿ ವಾಯ್ಸ್ ನ್ಯೂಸ್

ಶಿರಸಿ: ಕಾಡುಹಂದಿ ಬೇಟೆಯಾಡಿ ಮಾಂಸವನ್ನು ಬೇಯಿಸಿ ತಿನ್ನುವ ಉದ್ದೇಶದಿಂದ ಅಡುಗೆ ತಯಾರಿಸುತ್ತಿದ್ದ ಮೂವರು ಆರೋಪಿಗಳನ್ನು ಬನವಾಸಿ ಅರಣ್ಯ ವಿಭಾಗದ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದು, ಅವರ ಶೋಧ ಕಾರ್ಯ ನಡೆಯುತ್ತಿದೆ.

ಬಂಧಿತರಾದವರು ಶಿರಸಿ–ಹುಬ್ಬಳ್ಳಿ ರಸ್ತೆಯ ಮುಡೇಬೈಲ್‌ನ ಗಂಗಾಧರ ಗೌಡ ಹಾಗೂ ಶಂಕರ ಗೌಡ. ಇವರು ಶಂಕರ ನಾಯ್ಕ ಅವರ ಮನೆಯಲ್ಲಿ ಕಾಡುಹಂದಿ ಮಾಂಸವನ್ನು ಬೇಯಿಸುತ್ತಿದ್ದ ವೇಳೆ ಅರಣ್ಯ ಅಧಿಕಾರಿಗಳು ದಾಳಿ ನಡೆಸಿ ಸುಮಾರು ಆರು ಕೆಜಿಯಷ್ಟು ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.

ರವಿ ಗೌಡ ಹಾಗೂ ಗಣಪತಿ ಗೌಡ ಎಂಬ ಇಬ್ಬರು ಆರೋಪಿಗಳು ಪರಾರಿಯಾಗಿದ್ದು, ಅವರ ಬಂಧನಕ್ಕಾಗಿ ಅರಣ್ಯ ಇಲಾಖೆ ಶೋಧ ಮುಂದುವರೆಸಿದೆ.

ಈ ಕಾರ್ಯಾಚರಣೆಯನ್ನು ಡಿಎಫ್ಓ ಸಂದೀಪ ಸೂರ್ಯವಂಶಿ ಅವರ ಮಾರ್ಗದರ್ಶನದಲ್ಲಿ ಆರ್‌ಎಫ್‌ಒ ಭವ್ಯಾ ನಾಯ್ಕ ನೇತೃತ್ವದಲ್ಲಿ ಅಧಿಕಾರಿಗಳಾದ ಗಜೇಂದ್ರ ಮೊಗೇರ, ಬಾಲರಾಜ ಡಿ., ಯಶೋಧಾ ಹಾಗೂ ಮಂಜುನಾಥ ಗಂಗಮತ ಸೇರಿ ನಡೆಸಿದ್ದಾರೆ.

 

Please Share: