ಕಾರವಾರ: ನಗರದಲ್ಲಿ ಒಂದೇ ದಿನದಲ್ಲಿ ಎರಡು ಬೃಹತ್ ಹೆಬ್ಬಾವುಗಳು ಸಿಕ್ಕಿಬಿದ್ದ ಘಟನೆ ಜನರಲ್ಲಿ ಆತಂಕ ಹಾಗೂ ಕುತೂಹಲ ಮೂಡಿಸಿದೆ.
ಮೊದಲ ಘಟನೆ – ಅ. 7ರಂದು ಬೆಳಿಗ್ಗೆ 7.30ರ ಸುಮಾರಿಗೆ ಬಾಂಡಿಸಿಟ್ಟ ಹತ್ತಿರದ ದುರ್ಗಾದೇವಿ ಮಂಟಪದ ಬಳಿ ಬಲೆಯಲ್ಲಿ ಸಿಕ್ಕಿಕೊಂಡಿದ್ದ ಹೆಬ್ಬಾವನ್ನು ಅರಣ್ಯ ಇಲಾಖೆ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿದರು.
ಎರಡನೇ ಘಟನೆ – ಅದೇ ದಿನ ಬೆಳಿಗ್ಗೆ 8 ಗಂಟೆಗೆ ಕಾರವಾರ ಫ್ಲೈಓವರ್ ಕೆಳಗೆ, ಕಸ್ಟಮ್ ಕ್ವಾರ್ಟರ್ಸ್ ಎದುರುಗಡೆ ಕಾಣಿಸಿಕೊಂಡ ಇಂಡಿಯನ್ ರಾಕ್ ಪೈಥಾನ್ ಅನ್ನು ಕೂಡ ಸುರಕ್ಷಿತವಾಗಿ ರೆಸ್ಕ್ಯೂ ಮಾಡಲಾಯಿತು.
ಅರಣ್ಯ ಇಲಾಖೆಯ ಸಿಬ್ಬಂದಿ ರಾಜೇಶ್ ನಾಯ್ಕ ಮತ್ತು ಸುನಿಲ್ ಗೌಡ ತಕ್ಷಣ ಸ್ಥಳಕ್ಕೆ ಧಾವಿಸಿ, ಇಬ್ಬರೂ ಹೆಬ್ಬಾವುಗಳನ್ನು ಹಿಡಿದು ಕಾಡಿನಲ್ಲಿ ಸುರಕ್ಷಿತವಾಗಿ ಬಿಡುವ ಮೂಲಕ ಪ್ರಾಣಿಗಳ ಜೀವ ಉಳಿಸಿದರು.
ಜನರು ಈ ದೃಶ್ಯ ನೋಡಿ “ಒಂದೇ ದಿನದಲ್ಲಿ ಎರಡು ಪೈಥಾನ್ ರಕ್ಷಣೆ? ಇದು ಕಾರವಾರದ ಹೊಸ ದಾಖಲೆ!” ಎಂದು ಆಶ್ಚರ್ಯ ವ್ಯಕ್ತಪಡಿಸಿದರು.


