ಯಲ್ಲಾಪುರ:

ಅಂಗನವಾಡಿ ಮುಗಿಸಿ ಮನೆಗೆ ಹೋಗುತ್ತಿದ್ದ ಗರ್ಭಿಣಿ ಹಾಗೂ ನಾಲ್ಕು ಮಕ್ಕಳ ಮೇಲೆ ಬೃಹತ್ ಮರ ಬಿದ್ದು ಗರ್ಭಿಣಿ ಮೃತಪಟ್ಟ ಘಟನೆ ತಾಲೂಕಿನ ಕಿರವತ್ತಿ ಬಳಿಯ ಡೊಮಗೇರಿ ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ ನಾಲ್ವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಂಗನವಾಡಿಗೆ ತೆರಳಿದ್ದ ಮಗಳನ್ನು ಕರೆದುಕೊಂಡು ಮನೆ ಕಡೆಗೆ ಹೊರಟಿದ್ದ ಗರ್ಭಿಣಿ ಸಾವಿತ್ರಿ ಎಂಬವರು ಮೃತಪಟ್ಟಿದ್ದಾರೆ. ಮೂವರು ಮಕ್ಕಳನ್ನು ಸೇರಿ ಒಟ್ಟು ನಾಲ್ವರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ತಕ್ಷಣವೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆಯ ಸಮಯದಲ್ಲಿ ಒಟ್ಟು ಆರು ಮಕ್ಕಳು ಹಾಗೂ ಇಬ್ಬರು ಮಹಿಳೆಯರು ಅಲ್ಲಿದ್ದರು. ಉಳಿದ ಮೂವರು ಮಕ್ಕಳಿಗೆ ಯಾವುದೇ ಗಾಯಗಳಾಗಿಲ್ಲವೆಂದು ತಿಳಿದುಬಂದಿದೆ.
ಯಲ್ಲಾಪುರ ಪೊಲೀಸ್ ಠಾಣಾಯ ಸಿಪಿಐ ರಮೇಶ್ ಹರಗಾಪುರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Please Share: