ಕರಾವಳಿ ವಾಯ್ಸ್ ನ್ಯೂಸ್
ಹಳಿಯಾಳ: ಮಲವಡಿ ಗ್ರಾಮದಲ್ಲಿ ಸೋಮವಾರ ಸಂಜೆ ಸಂಭವಿಸಿದ ಭೀಕರ ಅಪಘಾತವು ಗ್ರಾಮಸ್ಥರನ್ನು ಕಂಗಾಲುಮಾಡಿಸಿದೆ. ಟಿಪ್ಪರ್ ಮತ್ತು ಸ್ಕೂಟಿಯ ನಡುವೆ ಡಿಕ್ಕಿ ಸಂಭವಿಸಿ, ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ದಾಂಡೇಲಿಯ ನವಗ್ರಾಮದ ನಾಗರಾಜ ಶಾಬಣ್ಣ ಕಾಂಬಳೆ ಟಿಪ್ಪರ್‌ನಲ್ಲಿ ಬೂದಿ ಸಾಗಿಸುತ್ತಿದ್ದ ವೇಳೆ, ಮಲವಡಿಯ ಸುವರ್ಣ ಅಂತ್ರೋಳಕರ (30) ಅವರ ಸ್ಕೂಟಿಯನ್ನು ಡಿಕ್ಕಿ ಪಡಿಸಿದ ಕಾರಣ ಅಪಘಾತ ಸಂಭವಿಸಿದೆ. ಸ್ಕೂಟಿಯಲ್ಲಿ ಹಿಂಬದಿಯಲ್ಲಿ ಶೋಬಾ ಮಾರುತಿ ಕಶೀಲಕರ (38) ಮತ್ತು ಇಬ್ಬರು ಮಕ್ಕಳು – ಆರುಶ (5) ಹಾಗೂ ಗೋಕುಳ (3) – ಕೂತಿದ್ದರು.
ಡಿಕ್ಕಿಯ ಪರಿಣಾಮವಾಗಿ ಸುವರ್ಣ ತಲೆಗೆ ಹಾಗೂ ಬಲಕೈಗೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದರು. ಶೋಬಾ ಮತ್ತು ಆರುಶ ಗಂಭೀರ ಗಾಯಗಳಿಂದ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ.
ಹಳಿಯಾಳ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲೆ ಮಾಡಿದ್ದು, ತನಿಖೆ ಮುಂದುವರಿಸುತ್ತಿದೆ.


