ಕರಾವಳಿ ವಾಯ್ಸ್ ನ್ಯೂಸ್
ಹೊನ್ನಾವರ: ತಾಲೂಕಿನ ಉಪ್ಪೋಣಿಯಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಕೇವಲ 12 ಗಂಟೆಯೊಳಗೆ ಭೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಹೊನ್ನಾವರ ಪೊಲೀಸರು ಯಶಸ್ವಿಯಾಗಿದ್ದಾರೆ.
ಉಪ್ಪೋಣಿಯಲ್ಲಿರುವ ಶಾಮಿಯಾನ ಗೋಡೌನ್‌ನಿಂದ ಹೊಸ ಹಾಗೂ ಹಳೆ ವೈರ್ ಬಂಡಲ್, ಫ್ಲವರ್ ಪಾಟ್, ಫೈಬರ್ ಟ್ಯೂಬ್ ಲೈಟ್ ಸೇರಿದಂತೆ ಸುಮಾರು ₹89 ಸಾವಿರ ಮೌಲ್ಯದ ವಸ್ತುಗಳು ಕಳವಾಗಿರುವ ಕುರಿತು ಮಹಮ್ಮದ್ ಗೌಸ್ ಹುಸೇನ್ ಸಾಬ್ ಅವರು ದೂರು ನೀಡಿದ್ದರು.
ದೂರು ದಾಖಲಾದ ಕೆಲವೇ ಗಂಟೆಗಳಲ್ಲೇ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಆರೋಪಿಗಳಾದ ಅಬ್ದುಲ್ ವಾಜಿದ್ ಅಬ್ದುಲ್ ಗಣಿ ಸಾಬ್ ಹಾಗೂ ಅಫ್ತಾಬ್ ಮೊಹಮ್ಮದ್ ಸಾಬ್ (ದಾಸಗೋಡ, ಸಂಶಿ, ಹೊನ್ನಾವರ) ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ ₹65 ಸಾವಿರ ಮೌಲ್ಯದ ಕಳುವಾದ ವಸ್ತುಗಳನ್ನು ಹಾಗೂ ಕೃತ್ಯಕ್ಕೆ ಬಳಸಲಾಗಿದ್ದ ಪಲ್ಸರ್ ಮೋಟಾರ್ ಸೈಕಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ಸಿದ್ದರಾಮೇಶ್ವರ ಎಸ್ ಹಾಗೂ ಪಿಎಸ್ಐ ಮಹಾಂತೇಶ ವಾಲ್ಮೀಕಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಮನೋಜ್ ಡಿ, ಗಜಾನನ ನಾಯ್ಕ್ ಹಾಗೂ ರವಿ ನಾಯ್ಕ್ ಭಾಗವಹಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.
*ಕ್ಷಣ ಕ್ಷಣದ ಸುದ್ದಿಗಳಿಗಾಗಿ ಕರಾವಳಿ ವಾಯ್ಸ್ ಗ್ರೂಪ್ ಸೇರಲು ಈ ಲಿಂಕ್ ಕ್ಲಿಕ್ ಮಾಡಿ*
https://chat.whatsapp.com/D4G99JuCZASH9M3LgJMyet
