ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ನಗರ ಹೃದಯಭಾಗದಲ್ಲಿರುವ ಬಸ್‌ಸ್ಟ್ಯಾಂಡ್ ಎದುರಿನ ಬಾಲಾಜಿ ಸ್ಟೋರ್ಸ್ ನಲ್ಲಿ ನಡೆದ ಕಳ್ಳತನದ ಘಟನೆ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಸೋಮವಾರ ರಾತ್ರಿ 7.23 ಗಂಟೆಯ ಸುಮಾರಿಗೆ, ಅಂಗಡಿಯೊಳಗೆ ಗ್ರಾಹಕರಂತೆ ನುಗ್ಗಿದ ವ್ಯಕ್ತಿಯೊಬ್ಬನು ಕ್ಷಣಾರ್ಧದಲ್ಲೇ ಕೌಂಟರ್ ಮೇಲೆ ಇಟ್ಟಿದ್ದ ಮೊಬೈಲ್ ಫೋನ್‌ನ್ನು ಎತ್ತಿ ಜೇಬಿಗೆ ಹಾಕಿಕೊಂಡು, ನಿಜಕ್ಕೂ ವೃತ್ತಿಪರ ಕಳ್ಳನಂತೆ ಸ್ಥಳದಿಂದ ಪರಾರಿಯಾದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.
ಈ ವೀಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸುತ್ತಾಡುತ್ತಿದ್ದು, ಕಳ್ಳನ ಗುರುತು ಪತ್ತೆಹಚ್ಚುವ ಯತ್ನದಲ್ಲಿ ನೆಟ್ಟಿಗರು ತೊಡಗಿದ್ದಾರೆ.
“ಯಾರಾದರೂ ಈ ವ್ಯಕ್ತಿಯನ್ನು ಗುರುತಿಸಿದರೆ, ದಯವಿಟ್ಟು ಮಾಹಿತಿ ನೀಡಿ,” ಎಂದು ಅಂಗಡಿ ಮಾಲಕರು ಸಾರ್ವಜನಿಕರನ್ನು ವಿನಂತಿಸಿದ್ದಾರೆ.
ಘಟನೆಯ ಕುರಿತು ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಕಳ್ಳನ ಪತ್ತೆಗೆ ತನಿಖೆ ಆರಂಭಿಸಿದ್ದಾರೆ


