ಹಳಿಯಾಳ: ಪಟ್ಟಣದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಕಳ್ಳತನದ ಘಟನೆ ಬೆಳಕಿಗೆ ಬಂದಿದೆ.

ದೇವಸ್ಥಾನದ ಬಾಗಿಲು ಮತ್ತು ಚೌಕಟ್ಟಿಗೆ ಅಳವಡಿಸಿದ್ದ ಬೆಳ್ಳಿಯನ್ನು ಕಳ್ಳರು ಕಿತ್ತು ಪರಾರಿಯಾಗಿದ್ದಾರೆ. ಸುಮಾರು ಐದು ಕೆಜಿ ತೂಕದ ಬೆಳ್ಳಿ ಕವಚವನ್ನು ಕಳವು ಮಾಡಲಾಗಿದ್ದು, ಇದರ ಮೌಲ್ಯ ಆರು ಲಕ್ಷ ರೂಪಾಯಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.

ಈ ದೇವಸ್ಥಾನ ಹಳಿಯಾಳದ ನೂತನ ಬಸ್ ನಿಲ್ದಾಣ ಹಾಗೂ ಪೊಲೀಸ್ ಠಾಣೆಯಿಂದ ಅತೀ ಸಮೀಪದಲ್ಲಿದೆ.

ಇದನ್ನೂ ಓದಿ: ಬೃಹತ್ ಮರ ಉರುಳಿ ಗರ್ಬಿಣಿ ಸಾವು

ಹೆದ್ದಾರಿಗೆಹೊಂದಿಕೊಂಡಿರುವುದರಿಂದ ಪ್ರಸಿದ್ಧಿ ಪಡೆದಿರುವ ಈ ದೇವಸ್ಥಾನದಲ್ಲಿ ನಡೆದ ಕಳ್ಳತನ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಈ ಘಟನೆ ಹಳಿಯಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Please Share: