ಜೋಯಿಡಾ: ರಾಮನಗರ–ಅನಮೋಡ್–ಗೋವಾ ಮಾರ್ಗದ ತಿನೆ ಘಾಟ್‌ನಲ್ಲಿ ಬುಧವಾರ ಸಂಭವಿಸಿದ ಸರಣಿ ಅಪಘಾತದಲ್ಲಿ ಒಬ್ಬರು ಮೃತಪಟ್ಟಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ.

ಮಾಹಿತಿಯಂತೆ, ರಾಮನಗರದಿಂದ ಗೋವಾ ಕಡೆಗೆ ಸಾಗುತ್ತಿದ್ದ VRL ಬಸ್, ಎದುರಿದ್ದ ಟ್ರಕ್‌ನ್ನು ಓವರ್‌ಟೇಕ್ ಮಾಡಲು ಮುಂದಾದ ವೇಳೆ ಎದುರುಗಡೆಯಿಂದ ಬರುತ್ತಿದ್ದ ಟಾಟಾ ಯೋಧ ಪಿಕಪ್ ವಾಹನಕ್ಕೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಪಿಕಪ್ ವಾಹನದ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಈ ವೇಳೆ ಪಿಕಪ್ ಹಿಂದೆ ಚಲಿಸುತ್ತಿದ್ದ ಬುಲೆಟ್ ಬೈಕ್ ಕೂಡ ಅಪಘಾತಕ್ಕೆ ಸಿಲುಕಿದ್ದು ಹಾನಿಗೊಳಗಾಗಿದೆ. ಬಸ್ ಹಾಗೂ ಟ್ರಕ್ ಕೂಡಾ ನಜ್ಜುಗುಜ್ಜಾಗಿದ್ದು, ನಿಯಂತ್ರಣ ತಪ್ಪಿದ ಟ್ರಕ್ ಪಲ್ಟಿಯಾಗುವ ಹಂತಕ್ಕೆ ತಲುಪಿದೆ. ಬಸ್‌ನಲ್ಲಿದ್ದ ಹಲವಾರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆಯ ಕುರಿತು ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

 

 

Please Share: