ಹೊನ್ನಾವರ: ತಾಲೂಕಿನ ಬೇರಂಕಿ ಗ್ರಾಮದ ಗ್ರಾಮಸ್ಥರು ಗ್ರಾಮ ಪಂಚಾಯತ ಕಚೇರಿ ಸ್ಥಳಾಂತರ ವಿಷಯಕ್ಕೆ ಆಕ್ರೋಶ ವ್ಯಕ್ತಪಡಿಸಿ ತಾಲೂಕಾ ಪಂಚಾಯತ ಕಚೇರಿ ಮುತ್ತಿಗೆ ಹಾಕಿದ ಘಟನೆ ಶುಕ್ರವಾರ ನಡೆದಿದೆ.
ಮೂಲಸ್ಥಳದಲ್ಲೇ ಪಂಚಾಯತ ಕಚೇರಿ ಮುಂದುವರೆಯಬೇಕೆಂದು ಆಗ್ರಹಿಸಿದ ಗ್ರಾಮಸ್ಥರು ಬಿಸಿಲಿನ ಮಧ್ಯೆಯೇ ಕುಳಿತು ಪ್ರತಿಭಟನೆ ನಡೆಸಿದರು. ಸೆಪ್ಟೆಂಬರ್ 30ರೊಳಗೆ ಕಚೇರಿ ಸ್ಥಳಾಂತರ ಮಾಡುವ ಕುರಿತು ಗ್ರಾಮ ಪಂಚಾಯತ ಸಭೆಯಲ್ಲಿ ಠರಾವು ನಡೆದಿದ್ದರೂ, ಅಧಿಕಾರಿಗಳು ಮಾತಿಗೆ ತಪ್ಪಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಪ್ರತಿಭಟನಾಕಾರರು ತಹಶೀಲ್ದಾರ್ ಕಚೇರಿಗೂ ತೆರಳಿ ಮನವಿ ಸಲ್ಲಿಸಿದರು. ಬಳಿಕ ತಾಲೂಕು ಪಂಚಾಯತ ಕಚೇರಿ ಬಾಗಿಲಿಗೆ ಧಾವಿಸಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ಈ ವೇಳೆ ಸ್ಥಳಕ್ಕೆ ತಾಲೂಕು ಪಂಚಾಯತ ಆಡಳಿತಾಧಿಕಾರಿ ಎನ್.ಆರ್. ಹೆಗಡೆ ಬಂದು ಗ್ರಾಮಸ್ಥರ ಬೇಡಿಕೆ ಆಲಿಸುವಂತೆ ಒತ್ತಾಯಿಸಿದರು. ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.


