ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಮನೆ ಎದುರು ನಿಲ್ಲಿಸಿದ್ದ ವಾಹನಗಳ ಗಾಜುಗಳನ್ನು ಕಲ್ಲಿನಿಂದ ಹೊಡೆದು ಹಾನಿಗೊಳಿಸಿದ ಘಟನೆ ನಗರದಲ್ಲಿ ನಡೆದಿದ್ದು, ಸಂಬಂಧಿಸಿದಂತೆ ಆರೋಪಿಯ ವಿರುದ್ಧ ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬೈತಕೂಲದ ಸೀಬರ್ಡ್ ರಸ್ತೆ ನಿವಾಸಿ ಹಾಗೂ ಗುತ್ತಿಗೆದಾರರಾದ ಶ್ರವಣ ಉಮೇಶ್ ಶಿರೋಡ್ಕರ್ (61) ನೀಡಿದ ದೂರಿನ ಪ್ರಕಾರ, ಮಾ.14 ರಂದು ರಾತ್ರಿ ಸುಮಾರು 10 ಗಂಟೆ ಸುಮಾರಿಗೆ ಸಂದೀಪ ಪ್ರಥಮೇಶ ಮರಾರೆ (22), ಹೋಟೆಲ್ ಉದ್ಯೋಗಿ, ಯಾವುದೋ ಕಾರಣಕ್ಕಾಗಿ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ಹಾನಿಗೊಳಿಸಿದ್ದಾನೆ ಎನ್ನಲಾಗಿದೆ.

KA-30/A-0366 ಸಂಖ್ಯೆಯ ವಾಹನ, ಟಿಪ್ಪರ್ KA-30/8664 ಹಾಗೂ ಮಹೀಂದ್ರ ಸ್ಕಾರ್ಪಿಯೋ KA-30/M-7676 ಕಾರಿನ ಮುಂಭಾಗ ಮತ್ತು ಹಿಂಭಾಗದ ಗಾಜುಗಳನ್ನು ಕಲ್ಲಿನಿಂದ ಹೊಡೆದು ಒಡೆದು ನಷ್ಟ ಉಂಟುಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಮಾ.15 ರಂದು ಪೊಲೀಸರಿಗೆ ದೂರು ನೀಡಲಾಗಿದ್ದು, ಆರಂಭದಲ್ಲಿ ಎನ್‌.ಸಿ. ಪ್ರಕರಣವಾಗಿ ದಾಖಲಾಗಿತ್ತು. ಬಳಿಕ ಪೀಡಿತರು ನ್ಯಾಯಾಲಯವನ್ನು ಸಂಪರ್ಕಿಸಿದ ಹಿನ್ನೆಲೆಯಲ್ಲಿ ಮಾ.18 ರಂದು ನ್ಯಾಯಾಲಯದ ಅನುಮತಿ ದೊರಕಿದ್ದು, ಬುಧವಾರ ಅದನ್ನು ಠಾಣೆಗೆ ಸಲ್ಲಿಸಿದ ನಂತರ ಎಫ್‌ಐಆರ್ ದಾಖಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಕಾರವಾರ ಶಹರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

 

 

Please Share: