ಕರಾವಳಿ ವಾಯ್ಸ್ ನ್ಯೂಸ್
ಜೋಯಿಡಾ: ತಾಲೂಕಿನ ಫೋಟೋಳಿ ಅರಣ್ಯ ಪ್ರದೇಶದಲ್ಲಿ ಶನಿವಾರ ರಾತ್ರಿ ಅಪರೂಪದ ದೃಶ್ಯ ಕಂಡುಬಂದಿದೆ.
ಕಾಳಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಫೋಟೋಳಿ ರಸ್ತೆಯಲ್ಲಿ ತಿಲಕರಾಜ್ ಅವರ ಕಾರಿನ ಬಳಿ ಚಿರತೆಯೊಂದು ಕಾಣಿಸಿಕೊಂಡು ಸ್ಥಳೀಯರಿಗೆ ಹಾಗೂ ಪ್ರವಾಸಿಗರಿಗೆ ಅಚ್ಚರಿ ಮೂಡಿಸಿದೆ.
ಚಿರತೆ ಕಾಣುತ್ತಿದ್ದಂತೆಯೇ ತಿಲಕರಾಜ್ ತಮ್ಮ ಕಾರಿನ ವೇಗ ಕಡಿಮೆ ಮಾಡಿ ಸುತ್ತಮುತ್ತ ಇನ್ನಿತರ ಚಿರತೆಗಳಿದ್ದಾರೆಯೇ ಎಂದು ಪರಿಶೀಲಿಸಿದ್ದಾರೆ. ಪರಿಶೀಲನೆಯ ನಂತರ, ಇದು ಒಂಟಿಯಾಗಿ ಸಂಚರಿಸುತ್ತಿದ್ದ ಚಿರತೆ ಎಂಬುದು ಗೊತ್ತಾಗಿದೆ.
ಸುಮಾರು 3 ರಿಂದ 5 ವರ್ಷ ವಯಸ್ಸಿನ ಈ ಚಿರತೆ ಸ್ವತಂತ್ರವಾಗಿ ಅರಣ್ಯ ಪ್ರದೇಶದಲ್ಲಿ ಓಡಾಡುತ್ತಿದೆ ಎಂದು ಅಂದಾಜಿಸಲಾಗಿದೆ.
ಈ ಅಪರೂಪದ ದೃಶ್ಯವನ್ನು ತಿಲಕರಾಜ್ ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ, ಇದು ಸ್ಥಳೀಯರಲ್ಲಿಯೇ ಕುತೂಹಲವನ್ನು ಹುಟ್ಟಿಸಿದೆ. ಅರಣ್ಯದಲ್ಲಿ ಪ್ರಾಣಿಗಳ ಹತ್ತಿರದ ಈ ನೈಜ ದೃಶ್ಯವು ನಿಸ್ಸಂದೇಹವಾಗಿ ಪ್ರಕೃತಿಯ ವೈಭವವನ್ನು ತೋರಿಸುತ್ತಿದೆ.


