ಮುಂಡಗೋಡ: ಜೂನ್ 22ರಂದು ತಾಲ್ಲೂಕಿನ ಪಾಳಾ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ 67 ಕೆರೆ ಹಾವಿನ ಮೊಟ್ಟೆಗಳು ಪತ್ತೆಯಾಗಿದ್ದು, ಈ ವಿಶೇಷ ಘಟನೆ ಸ್ಥಳೀಯರಲ್ಲಿಯೇ ಕುತೂಹಲ ಮೂಡಿಸಿದೆ.

ಅರಣ್ಯ ಗಸ್ತು ವನಪಾಲಕ ಮುತ್ತುರಾಜ ಹಳ್ಳಿ ಈ ಮೊಟ್ಟೆಗಳನ್ನು ಸುರಕ್ಷಿತವಾಗಿ ಮನೆಗೆ ತಂದು, ವೈಜ್ಞಾನಿಕ ರೀತಿಯಲ್ಲಿ ಕೃತಕ ಕಾವು ನೀಡಿದ್ದಾರೆ. ಸುಮಾರು 50 ದಿನಗಳ ಕಾಳಜಿಯ ನಂತರ, ಮೊಟ್ಟೆಗಳಿಂದ ಹೊರಬಂದ ಹಾವಿನ ಮರಿಗಳು ತಮ್ಮ ಸ್ವಾಭಾವಿಕ ಪರಿಸರಕ್ಕೆ ಮರಳಲು ಸಿದ್ಧಗೊಂಡವು.

ಕಾತೂರ ವಲಯದ ಅರಣ್ಯಾಧಿಕಾರಿ ವಿರೇಶ ಅವರ ಮಾರ್ಗದರ್ಶನದಲ್ಲಿ, ಮರಿಗಳನ್ನು ಸೂಕ್ತ ಪರಿಸರದಲ್ಲಿ ಬಿಡುಗಡೆ ಮಾಡಲಾಯಿತು. ಈ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಸುನೀಲ್ ಹೊನ್ನಾವರ ಹಾಗೂ ಕಾತೂರ ವಲಯದ ಸಿಬ್ಬಂದಿಗಳ ಸಹಕಾರವಿತ್ತು.

ಈ ಸಾಹಸವು ಮಕ್ಕಳಲ್ಲಿ ಮತ್ತು ಸ್ಥಳೀಯರಲ್ಲಿ ಜೀವಜಾಲ ಸಂರಕ್ಷಣೆ ಬಗ್ಗೆ ಹೊಸ ಕುತೂಹಲವನ್ನು ಹುಟ್ಟಿಸಿದೆ. ಈಗ 67 ಹಾವಿನ ಮರಿಗಳು ಪಾಳಾ ನೈಸರ್ಗಿಕ ವಾತಾವರಣದಲ್ಲಿ ತಮ್ಮ ಸ್ವತಂತ್ರ ಜೀವನವನ್ನು ಆರಂಭಿಸಿವೆ.

 

 

Please Share: