ಅಂಕೋಲಾ: ತಾಲೂಕಿನ ಕೇಣಿಯಲ್ಲಿ ಪ್ರತಿಷ್ಠಾಪಿಸಿರುವ ದೇವಿ ಕಾಳಿಯ ಮೂರ್ತಿಯನ್ನು ಸ್ವತಃ ನೋಡಲು ಸೋಮವಾರ ಅಂಕೋಲಾಕ್ಕೆ ಕಿರುತೆರೆಯ ನಟಿ ಜೀವಿತಾ ವಶಿಷ್ಠ ಭೇಟಿ ನೀಡಿದರು. ಮಣ್ಣಿನಲ್ಲಿ ನಿರ್ಮಿತ ಈ ಮೂರ್ತಿ, ದೇವಿಯ ಪ್ರತಿಯೊಂದು ರೂಪವನ್ನು ನಿಖರವಾಗಿ ಪ್ರತಿಬಿಂಬಿಸುತ್ತಿರುವುದು ಅವರು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.
16ನೇ ವರ್ಷದ ನವರಾತ್ರಿ ದಸರಾ ಉತ್ಸವದ ಭಾಗವಾಗಿ, ಕೇಣಿಯಲ್ಲಿ ಪ್ರಸಿದ್ಧ ಧಾರಾವಾಹಿ ಶ್ರೀದೇವಿ ಮಹಾತ್ಮೆನಲ್ಲಿ ಜೀವಿತಾ ವಶಿಷ್ಠ ನಿರ್ವಹಿಸಿರುವ ದೇವಿ ಕಾಳಿಯ ಪಾತ್ರದ ಮಾದರಿಯ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ.
ಅದ್ಭುತ ಮೂರ್ತಿಯನ್ನು ಪ್ರಸಿದ್ಧ ಕಲಾವಿದ ದಿನೇಶ್ ಮೇತ್ರಿ ಅವರ ಕೈಚಳಕದಲ್ಲಿ ರೂಪಿಸಲಾಗಿದೆ. ಈ ಮೂರ್ತಿಯನ್ನು ನೋಡಿದ ಜೀವಿತಾ, “ಮೂರ್ತಿ ನಿಖರವಾಗಿ ದೇವಿಯೆಂದು ಅನುಭವವಾಗುವಂತಿದೆ. ನವರಾತ್ರಿಯಲ್ಲಿ ಇದನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿರುವುದು ಅವಿಸ್ಮರಣೀಯ ಕ್ಷಣ,” ಎಂದು ಅಭಿಪ್ರಾಯಿಸಿದರು.
ಅವರು ಶಿಲ್ಪಿ ದಿನೇಶ್ ಮೇತ್ರಿಯನ್ನು “ರಾಷ್ಟ್ರ ಮಟ್ಟದ ಅದ್ಭುತ ಕಲಾವಿದ” ಎಂದು ಶ್ಲಾಘಿಸಿದರು ಮತ್ತು ತಮ್ಮ ಸಣ್ಣ ಕಲಾವಿದ ಜೀವನದ ಅನುಭವದಲ್ಲಿ ಈ ಸಂದರ್ಭದಲ್ಲಿ ಭಾಗವಹಿಸುವುದು ಸಂತೋಷದ ಸಂಗತಿ ಎಂದರು.


