ಕರಾವಳಿ ವಾಯ್ಸ ನ್ಯೂಸ್

ಬೆಂಗಳೂರು: ಬೆಂಗಳೂರಿನ ಜನತೆಯ ಸಮಸ್ಯೆಗಳನ್ನು ಆಲಿಸುವ ಉದ್ದೇಶದಿಂದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನಡೆಸಿದ “ಬೆಂಗಳೂರು ನಡಿಗೆ” ಕಾರ್ಯಕ್ರಮದಲ್ಲಿ, ಬಿಜೆಪಿ ಶಾಸಕ ಮುನಿರತ್ನ ಗಂಭೀರ ಆರೋಪಗಳನ್ನು ಮಾಡಿದ್ದರು. ಅವರು ಪ್ರತಿಭಟನೆ ನಡೆಸಿ, ಏಕಾಂಗಿ ಧರಣಿ ನಡೆಸಿದ ಬಳಿಕ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮುನಿರತ್ನ ಅವರು, ಸಿಎಂ ಸಿದ್ದರಾಮಯ್ಯ ಮೇಲೆ ಮಾಟ ಮಂತ್ರ ನಡೆಸಲಾಗಿದೆ. “ಮಂತ್ರವಾದಿಗಳು ಡಬ್ಬದಲ್ಲಿ ಹಾಕಿ ವಶೀಕರಿಸಿದ್ದಾರೆ. ಇದಕ್ಕಾಗಿ ಕೋಣ ಬಲಿ ನೀಡಿದ್ದಾರೆ, ಹೀಗಾಗಿ ಸಿಎಂ ಮಂಕಾಗಿದ್ದಾರೆ,” ಎಂದು ಅವರು ಆರೋಪಿಸಿದರು.

ಶಾಸಕರ ವಿವರಗಳ ಪ್ರಕಾರ, “ಮೊದಲಿನ ಸಿದ್ದರಾಮಯ್ಯನವರೇ ಇಲ್ಲ. ಈಗ ಅವರು ರಸ್ತೆ ಗುಂಡಿ ಬಿದ್ದರೂ, ಜನ ಸಾಯುತ್ತಿದ್ದರೂ ಗಮನ ನೀಡುತ್ತಿಲ್ಲ. ಇವರ ವೈಖರಿ ಮಂಕಾಗಿದೆ. ಇದಕ್ಕೆಲ್ಲ ಮಾಟ ಮತ್ತು ಮಂತ್ರದ ವಶೀಕರಣ ಕಾರಣವಾಗಿದೆ,” ಎಂದು ಮುನಿರತ್ನ ಹೇಳಿದರು.

ಇದರ ಜೊತೆಗೆ, ಕುಮಾರಸ್ವಾಮಿಯವರ ಮೇಲೆಯೂ ಮಾಟ ಮಂತ್ರ ನಡೆಸಲಾಗಿದೆ ಮತ್ತು ಕೋಣ ಬಲಿ ನೀಡಲಾಗಿದೆ. ಇದರಿಂದ ಅವರಿಗೆ ಆರೋಗ್ಯ ಸಮಸ್ಯೆಗಳು ಎದುರಾಗಿವೆ ಎಂದು ಅವರು ಡಿ.ಕೆ.ಶಿವಕುಮಾರ್ ವಿರುದ್ಧ ನೇರವಾಗಿ ಹೆಸರು ಹೇಳದೇ ಪರೋಕ್ಷವಾಗಿ ಆರೋಪಿಸಿದ್ದಾರೆ.

Please Share: