ಕರಾವಳಿ ವಾಯ್ಸ್ ನ್ಯೂಸ್

ಕಾರವಾರ: ಬೈಕೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಗಿ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಆರ್‌ಟಿಓ ಕಚೇರಿ ಬಳಿ ಶನಿವಾರ ನಡೆದಿದೆ.

ಗಾಯಗೊಂಡ ಚಾಲಕನನ್ನು ವಿನಾಯಕ ಜಿ (37) ಎಂದು ಗುರುತಿಸಲಾಗಿದೆ. ವಿನಾಯಕ ಅವರು ಅಪಸ್ಮಾರ (ಮೂರ್ಛೆ) ಸಮಸ್ಯೆಯಿಂದ ಬಳಲುತ್ತಿದ್ದು, ಶನಿವಾರ ಮಧ್ಯಾಹ್ನ ಸದಾಶಿವಗಡದಿಂದ ಕಾರವಾರಕ್ಕೆ ಬರುವಾಗ ಮಾರ್ಗಮಧ್ಯೆ ಆರ್‌ಟಿಓ ಕಚೇರಿ ಬಳಿ ಬೈಕ್ ಮೇಲೆ ನಿಯಂತ್ರಣ ಕಳೆದುಕೊಂಡಿದ್ದಾರೆ.

ಬೈಕ್‌ನ ವೇಗ ನಿಯಂತ್ರಣ ಸಾಧ್ಯವಾಗದಿರುವುದರಿಂದ ವಿನಾಯಕ ಅವರು ಕೆಲವು ಅಡಿಗಳ ದೂರದವರೆಗೆ ರಸ್ತೆಯಲ್ಲಿ ಸವರಿಕೊಂಡು ಹೋಗಿದ್ದಾರೆ. ಇದರಿಂದಾಗಿ ವಿನಾಯಕ ಅವರ ಕೈ, ಕಾಲು, ಎದೆಗೆ ಗಂಭೀರವಾದ ಗಾಯಗಳಾಗಿವೆ. ಹೆಲ್ಮೆಟ್ ಇಲ್ಲದೇ ಇದ್ದರೆ ಪ್ರಾಣಾಪಾಯ ಎದುರಾಗುವ ಸಾಧ್ಯತೆ ಇತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ವಿದ್ಯಾರ್ಥಿ ಒಕ್ಕೂಟದ ರಾಘು ನಾಯ್ಕ ಮತ್ತು ಆರ್‌ಟಿಓ ಕಚೇರಿಯ ಸಿಬ್ಬಂದಿ ಹಾಗೂ ಸಾರ್ವಜನಿಕರು ವಿನಾಯಕ ಅವರನ್ನು ಆಸ್ಪತ್ರಗೆ ಸಾಗಿಸಲು ನೆರವಾದರು. ಅಂಬುಲೆನ್ಸ್ ಚಾಲಕ ಸುರೇಶ್ ಕಾಂಬಳೆ ಅವರು ತಕ್ಷಣ ಸ್ಥಳಕ್ಕೆ ಅಂಬುಲೆನ್ಸ್ ತಂದು ಗಾಯಾಳುವನ್ನು ಆಸ್ಪತ್ರಗೆ ಸಾಗಿಸಲು ನೆರವಾದರು.

Please Share: