ಕರಾವಳಿ ವಾಯ್ಸ್ ನ್ಯೂಸ್

ಭಟ್ಕಳ: ತಾಲೂಕಿನ ಹೆಬಳೆ ಗಾಂಧೀನಗರದ 25 ವರ್ಷದ ಮಹಿಳೆಯೊಬ್ಬಳಿಗೆ ಮದುವೆಯಾಗುವುದಾಗಿ ಭರವಸೆ ನೀಡಿ ಲೈಂಗಿಕ ದೌರ್ಜನ್ಯ ಎಸಗಿರುವ ಗಂಭೀರ ಪ್ರಕರಣ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಬೆಳಕಿಗೆ ಬಂದಿದೆ.

ದೂರುದಾರೆಯ ಮಾಹಿತಿಯ ಪ್ರಕಾರ, ಆರೋಪಿ ಡಾ. ನಾಸೀರ್ ಅಹ್ಮದ್ (56), ತಂದೆ ಎಂ.ಎ. ಅಲಿ ಸಾಹೇಬ್, ಆಜಾದ್ ನಗರ 6ನೇ ಕ್ರಾಸ್‌ನ ನಿವಾಸಿ. ಮಹಿಳೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ ವೈದ್ಯ, ಅವಳನ್ನು ಭಟ್ಕಳ, ಹೊನ್ನಾವರ, ಚಿಕ್ಕಮಗಳೂರು ಮತ್ತು ಬೆಂಗಳೂರಿನ ಲಾಡ್ಜ್‌ಗಳಿಗೆ ಕರೆದುಕೊಂಡು ಹೋಗಿ ಅನೇಕ ಬಾರಿ ದೈಹಿಕ ದೌರ್ಜನ್ಯ ಎಸಗಿದ್ದಾನೆಂದು ಆರೋಪಿಸಲಾಗಿದೆ.

ಮಹಿಳೆಯ ಒಪ್ಪಿಗೆ ಇಲ್ಲದೆ ಸಂಬಂಧ ಬೆಳೆಸಿದ ನಂತರ, ಮದುವೆಯಾಗುತ್ತೇನೆ ಎಂದು ನಂಬಿಸಿ ಹತ್ತು ದಿನಗಳ ಕಾಲ ತನ್ನೊಂದಿಗೆ ಇಟ್ಟುಕೊಂಡು ಪ್ರತಿದಿನ ಬಲವಂತವಾಗಿ ದೌರ್ಜನ್ಯ ಮುಂದುವರಿಸಿದ್ದಾನೆ. ಆದರೆ ನಂತರ ಮದುವೆಗೆ ನಿರಾಕರಿಸಿ, ವಿಷಯ ಬಾಯ್ಬಿಟ್ಟರೆ ಪರಿಣಾಮ ಎದುರಿಸಬೇಕೆಂದು ಬೆದರಿಕೆ ಹಾಕಿದ್ದಾನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆಯ ಹಿನ್ನೆಲೆಯಲ್ಲಿ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಅತ್ಯಾಚಾರ, ಮೋಸ, ವಂಚನೆ, ಅಪಹರಣ ಹಾಗೂ ಬೆದರಿಕೆ ಪ್ರಕರಣ ದಾಖಲಿಸಿಕೊಂಡು ಆರೋಪಿ ವೈದ್ಯನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

ಸ್ಥಳೀಯರಲ್ಲಿ ಆಶ್ಚರ್ಯ ಮತ್ತು ಆಕ್ರೋಶ:ಸಾಮಾಜಿಕವಾಗಿ ಗೌರವ ಪಡೆದ ವೈದ್ಯರೇ ಇಂತಹ ಕೃತ್ಯದಲ್ಲಿ ಭಾಗಿಯಾಗಿರುವುದು ಸ್ಥಳೀಯರಲ್ಲಿ ಬೆಚ್ಚಿಬೀಳುವಂತೆ ಮಾಡಿದ್ದು, ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ ವ್ಯಕ್ತವಾಗಿದೆ.

 

Please Share: