ಕರಾವಳಿ ವಾಯ್ಸ್ ನ್ಯೂಸ್

ಕಾರವಾರ: ಮುಂದಿನ ಬಜೆಟ್ ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಿಸದಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಇದು ಶತ ಸಿದ್ದ ಎಂದ ಶಾಸಕ ಸತೀಶ ಸೈಲ್ ಹೇಳಿದ್ದಾರೆ.

ಕಾರವಾರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿ, ಜಿಲ್ಲೆಯ ಜನರ ಮುಖ್ಯ ಬೇಡಿಕೆಯಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮಂಜೂರು ಮಾಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಮಾತನಾಡಿದ್ದೇನೆ‌. ಈ ವಿಷಯದ ಕುರಿತಂತೆ ನವೆಂಬರ್ ನಲ್ಲಿ ಭೇಟಿ ಆಗಲು ತಿಳಿಸಿದ್ದಾರೆ. ಮುಂದಿನ ವರ್ಷದ ಮಾರ್ಚ್ ಬಜೆಟ್ ನಲ್ಲಿ ಮಂಜೂರು ಮಾಡುವ ಭರವಸೆ ಇದೆ. ಮಂಜೂರು ಆಗದಿದ್ದರೆ ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ. ಇದು ಶತಸಿದ್ದ. ಈಗಾಗಲೇ ಪಿಡಬ್ಲೂಡಿ ಮಂತ್ರಿ ಸತೀಶ ಜಾರಕಿಹೋಳಿ ಅವರೊಂದಿಗೆ ಸದಾಶಿವಗಡದಿಂದ ಕೋಡಿಬಾಗ ವರೆಗೆ ಹೊಸ ಸೇತುವೆ ಮಾಡುವ ಬಗ್ಗೆ ಮಾತನಾಡಿದ್ದೇನೆ. ಮಾಡಿಯೇ ತೀರುತ್ತೇನೆ ಎಂದರು.

Please Share: