ಕಾರವಾರ: ಬೇಲೇಕೇರಿ ಬಂದರಿನಿಂದ ಅಕ್ರಮ ಕಬ್ಬಿಣದ ಅದಿರು ರಫ್ತು ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ಕಾರವಾರ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರಿಗೆ ಇಂದು(ಗುರುವಾರ) ನ್ಯಾಯಾಲಯದಿಂದ ಮಧ್ಯಂತರ ಜಾಮೀನು ಲಭಿಸಿದೆ. ಇದರಿಂದಾಗಿ ಶಾಸಕರಿಗೆ ದೊಡ್ಡ ಮಟ್ಟದ ಬಿಗ್ ರಿಲೀಫ್ ಸಿಕ್ಕಂತಾಗಿದೆ.

ಮಂಗಳವಾರ ರಾತ್ರಿ ಇಡಿ (ED) ಅಧಿಕಾರಿಗಳು ಸೈಲ್ ಅವರನ್ನು ಬಂಧಿಸಿದ್ದು, ಬುಧವಾರ ಬೆಳಿಗ್ಗೆ ಅವರನ್ನು ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರ ಮುಂದೆ ಹಾಜರುಪಡಿಸಲಾಯಿತು. ವಿಚಾರಣೆ ಬಳಿಕ, ನ್ಯಾಯಾಧೀಶರು ಎರಡು ದಿನಗಳ ಕಾಲ ಸೈಲ್ ಅವರನ್ನು ಇಡಿ ವಶಕ್ಕೆ ನೀಡುವಂತೆ ಆದೇಶಿಸಿದ್ದರು.

ಆದರೆ ಇಂದು ನಡೆದ ವಿಚಾರಣೆಯಲ್ಲಿ, ನ್ಯಾಯಾಲಯವು ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು, ಸೈಲ್ ಪರವಾಗಿ ಇದು ಮಹತ್ವದ ತೀರ್ಪಾಗಿದೆ.

ಇದಕ್ಕೂ ಮುನ್ನ ಆಗಸ್ಟ್ 13-14ರಂದು ಇಡಿ ಅಧಿಕಾರಿಗಳು ಕಾರವಾರ ಶಾಸಕ ಸೈಲ್ ಅವರ ಮನೆ ಹಾಗೂ ಸಂಬಂಧಿಸಿದ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ್ದರು. ಬೇಲೇಕೇರಿ ಬಂದರಿನಿಂದ ಅಕ್ರಮ ಅದಿರು ರಫ್ತು ಪ್ರಕರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ (Money Laundering) ತನಿಖೆ ಹಿನ್ನೆಲೆ ದಾಳಿಗಳು ನಡೆದಿದ್ದವು.

 

Please Share: