ಶಿರಸಿ: ಬನವಾಸಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊರ್ಲಕಟ್ಟ–ಗೂಣೂರು ರಸ್ತೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ನಡೆದಿದ್ದ ಅಂದರ್ ಬಾಹರ್ ಇಸ್ಪೀಟ್ ಜೂಜಾಟದ ಅಡ್ಡೆಯ ಮೇಲೆ ಪೊಲೀಸರು ಭಾನುವಾರ ಸಂಜೆ ದಾಳಿ ನಡೆಸಿ ಒಬ್ಬನನ್ನು ಬಂಧಿಸಿದ್ದಾರೆ.

ಬಂಧಿತನನ್ನು ಜಾಹಿರ್ ಖಾನ್ ಎಂದು ಗುರುತಿಸಲಾಗಿದ್ದು, ಇನ್ನೂ ನಾಲ್ವರು ಆರೋಪಿಗಳಾದ ಮಕ್ಬುಲ್ ಸಾಬ್, ಪ್ರವೀಣ್, ಮಹಮ್ಮದ್ ರಫೀಕ್ ಮತ್ತು ಪರಮೇಶ್ವರ ಸ್ಥಳದಿಂದ ಪರಾರಿಯಾಗಿದ್ದಾರೆ.

ಪಿಎಸ್ಐ ಮಾಂತೇಶ್ ಕುಂಬಾರ್ ಅವರ ನೇತೃತ್ವದಲ್ಲಿ ಬನವಾಸಿ ಪೊಲೀಸ್ ಸಿಬ್ಬಂದಿ ದಾಳಿ ನಡೆಸಿದ್ದು, ಬಂಧಿತನಿಂದ ರೂ.1400 ನಗದು ಮತ್ತು ಪ್ಲಾಸ್ಟಿಕ್ ತಾಡಪತ್ರಿಯನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸ್ ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

 

Please Share: