ಕರಾವಳಿ ವಾಯ್ಸ್ ನ್ಯೂಸ್

ಬೆಂಗಳೂರು: ಪರಿಸರ ಸಂರಕ್ಷಣೆಗೆ ಜೀವನವನ್ನೇ ಸಮರ್ಪಿಸಿದ ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ (114) ಅವರು ಬೆಂಗಳೂರಿನ ಜಯನಗರದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ.

ಕೆಲವು ದಿನಗಳಿಂದ ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.

ತಿಮ್ಮಕ್ಕ ಅವರು ರಾಮನಗರ ಜಿಲ್ಲೆಯ ಹುಲಿಕಲ್–ಕುದೂರು ರಸ್ತೆ ಮಾರ್ಗದ ಸುಮಾರು 4.5 ಕಿಲೋಮೀಟರ್ ವ್ಯಾಪ್ತಿಯಲ್ಲಿ ಶತಕಗಳಷ್ಟು ಆಲದ ಮರಗಳನ್ನು ನೆಟ್ಟು ಬೆಳೆಸಿದ ಹಸಿರು ಕ್ರಾಂತಿಯ ಉದಾಹರಣೆಯಾಗಿದ್ದರು. ತಮ್ಮ ಪತಿಯ ಜೊತೆಗೂಡಿ ನೂರಾರು ಸಸಿಗಳನ್ನು ನೆಟ್ಟು ಪೋಷಿಸಿದ ಅವರ ಹಸಿರು ಸೇವೆ ರಾಜ್ಯದಷ್ಟೇ ದೇಶದ ಗಮನಸೆಳೆದಿತ್ತು.

ಶಿಕ್ಷಣ ಸೌಲಭ್ಯವಿಲ್ಲದ ಪರಿಸ್ಥಿತಿಯಲ್ಲೇ ಕಾರ್ಮಿಕ ಬದುಕಿನಿಂದ ಪ್ರಾರಂಭವಾದ ಅವರ ಪರಿಶ್ರಮಕ್ಕೆ ರಾಷ್ಟ್ರ ಮಟ್ಟದ ಗೌರವಗಳು ದೊರೆತಿದ್ದು, 2019ರಲ್ಲಿ ಭಾರತ ಸರ್ಕಾರವು ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಿತ್ತು.

ಪರಿಸರ ಹಿತಕ್ಕಾಗಿ ನಡೆಸಿದ ಅವರ ಜೀವನಪರ್ಯಂತ ಸೇವೆ ಮುಂದಿನ ಪೀಳಿಗೆಗಳಿಗೆ ಪ್ರೇರಣೆಯಾಗಿಯೇ ಉಳಿಯಲಿದೆ.

 

Please Share: