ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳ 53 ಗ್ರಾಮ ಪಂಚಾಯತಗಳಲ್ಲಿ ಹೊಸದಾಗಿ ಗ್ರಾಮ ಒನ್ ಕೇಂದ್ರಗಳನ್ನು ಆರಂಭಿಸಲು ಪ್ರಾಂಚೈಸಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಂಕೋಲಾ ತಾಲೂಕಿನ ಅಗಸೂರ, ಅಲಗೇರಿ, ಬೆಳಂಬರ, ಬೆಳಸೆ; ಭಟ್ಕಳ ತಾಲೂಕಿನ ಕೊಪ್ಪಾ, ಮಾವಿನಕುರ್ವೆ; ದಾಂಡೇಲಿ ತಾಲೂಕಿನ ಆಲೂರ, ಅಂಬೇವಾಡಿ, ಅಂಬಿಕಾನಗರ; ಹಳಿಯಾಳ ತಾಲೂಕಿನ ಬೆಳವಟಗಿ, ಯಾಡೋಗಾ; ಹೊನ್ನಾವರ ತಾಲೂಕಿನ ಚಿಕ್ಕನಕೊಡ, ಕೆಳಗಿನೂರ, ಕೊಡಾಣಿ, ಮುಗ್ವಾ, ನಗರಬಸ್ತಿಕೇರಿ, ಉಪ್ಪೋಣಿ;
ಕಾರವಾರ ತಾಲೂಕಿನ ಚೆಂಡಿಯಾ, ಘಡಸಾಯಿ, ಕೆರವಡಿ; ಕುಮಟಾ ತಾಲೂಕಿನ ಅಲಕೊಡ, ಬರ್ಗಿ, ದೀವಗಿ, ಕಲಾಭಾಗ, ಮಿರ್ಜಾನ, ಮುರೂರ, ಸೊಪ್ಪಿನಹಳ್ಳಿ; ಮುಂಡಗೋಡ ತಾಲೂಕಿನ ಚವಡಳ್ಳಿ, ಗುಂಜಾವತಿ, ಇಂದೂರ, ಕಾತೂರ, ಮೈನಳ್ಳಿ, ನಾಗನೂರ, ನಂದಿಕಟ್ಟಾ; ಸಿದ್ದಾಪುರ ತಾಲೂಕಿನ ಅನಲೆಬೈಲ್, ಹಲಗೇರಿ, ಇಟಗಿ, ಮಾನಮನೆ, ನಿಲ್ಕುಂದ;
ಶಿರಸಿ ತಾಲೂಕಿನ ಬೈರುಂಬೆ, ಬಿಸಲಕೊಪ್ಪ, ಮಂಜಗುಣಿ, ಹುಲೆಕಲ್, ನೆಗ್ಗು, ಸಾಲ್ಕನಿ, ಸುಗಾವಿ; ಸೂಪಾ ತಾಲೂಕಿನ ಗಂಗೋಡಾ, ಅಣಶಿ, ಬಂಜಾರಕುಣಂಗ, ಶಿಂಗಾರಗಾಂವ, ನಾಗೋಡಾ, ಉಳವಿ ಹಾಗೂ ಯಲ್ಲಾಪುರ ತಾಲೂಕಿನ ನಂದೋಳ್ಳಿ ಸೇರಿದಂತೆ ಒಟ್ಟು 53 ಗ್ರಾಮ ಪಂಚಾಯತಗಳಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ಅನುಷ್ಠಾನಗೊಳಿಸಲು ಯೋಜನೆ ರೂಪಿಸಲಾಗಿದೆ.
ಈ ಕೇಂದ್ರಗಳ ಮೂಲಕ ಗ್ರಾಮ ಮಟ್ಟದಲ್ಲೇ ವಿವಿಧ ಸರ್ಕಾರಿ ಸೇವೆಗಳನ್ನು ಸಮಗ್ರವಾಗಿ ನಾಗರಿಕರಿಗೆ ಒದಗಿಸುವ ಉದ್ದೇಶ ಹೊಂದಲಾಗಿದೆ.
ಆಸಕ್ತರು ಮಾರ್ಚ್ 15 ರೊಳಗಾಗಿ
https://sevasinduservices.karnataka.gov.in
ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ತಾಲೂಕಿನ ತಹಶೀಲ್ದಾರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
