ಕರಾವಳಿ ವಾಯ್ಸ್ ನ್ಯೂಸ್

ಅಂಕೋಲಾ: ಕರಾವಳಿಯ ಸಮುದ್ರ ತೀರದ ಸಾಂಪ್ರದಾಯಿಕ ಚಟುವಟಿಕೆಯಾದ ಚಿಪ್ಪಿಕಲ್ಲು ಆರಿಸಲು ತೆರಳಿದ್ದ ವ್ಯಕ್ತಿಯೊಬ್ಬರು ಅಲೆಗಳ ಅಬ್ಬರಕ್ಕೆ ಬಲಿಯಾದ ಹೃದಯವಿದ್ರಾವಕ ಘಟನೆ ಬೆಲೇಕೇರಿ ಸಮುದ್ರ ತೀರದಲ್ಲಿ ನಡೆದಿದೆ.

ಭಾವಿಕೇರಿ ಗ್ರಾಮದ ಆನಂದು ನಾಯ್ಕ್ (52) ಮೃತಪಟ್ಟವರು. ಪ್ರತಿದಿನದಂತೆ ಚಿಪ್ಪಿಕಲ್ಲು (ಶೆಲ್ ಮೀನು) ಆರಿಸಲು ಸಮುದ್ರ ತೀರಕ್ಕೆ ತೆರಳಿದ್ದ ಅವರು, ಈ ಬಾರಿ ಅಲೆಗಳ ಆರ್ಭಟಕ್ಕೆ ಸಿಲುಕಿ ಜೀವ ಕಳೆದುಕೊಂಡರು. ಮಾಹಿತಿ ಪ್ರಕಾರ, ಸಮುದ್ರದ ಅಲೆಗಳು ಏಕಾಏಕಿ ಎತ್ತರಕ್ಕೆ ಎದ್ದುಕೊಂಡು ಬಂದು ಅವರನ್ನು ಆಳಕ್ಕೆ ಎಳೆದೊಯ್ದಿವೆ.

ಈ ಘಟನೆಯಿಂದ ಜಿಲ್ಲೆಯ ಕರಾವಳಿಯಲ್ಲಿ ದುಃಖದ ಛಾಯೆ ಆವರಿಸಿದೆ. ಘಟನೆಯ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

 

Please Share: