ಕುಮಟಾ:

ತಾಲೂನಲ್ಲಿ ಮಂಗಳವಾರ ಮಧ್ಯಾಹ್ನ ಭಾರಿ ಗಡುಗು, ಸಿಡಿಲಿ ಸಹಿತ ಮಳೆಯಾಗಿದೆ. ಈ ವೇಳೆ ತಾಲೂಕಾ ಆಡಳಿತ ಸೌಧದ ಕಟ್ಟಡದ ಮುಂಬಾಗಕ್ಕೆ ಸಿಡಿಲು ಬಡಿದಿದ್ದರಿಂದ ಕಟ್ಟಡದ ಮುಂಭಾಗಕ್ಕೆ ಸ್ವಲ್ಪ ಹಾನಿಯಾಗಿದೆ. ಜೊತೆಗೆ ಮುಂಬಾಗಕ್ಕೆ ತಾಲೂಕಾ ಆಡಳಿತ ಸೌಧ, ಕುಮಟಾ ಎಂದು ಲಗತ್ತಿಸಿದ್ದ ಆಕ್ಷರದಲ್ಲಿ 2 ಅಕ್ಷರಗಳು ಸಿಡಿಲ ಹೊಡೆತಕ್ಕೆ ಉದಿರಿದೆ. ಅಲ್ಲದೇ ಸೌಧದ ವಿದ್ಯುತ್ ಸಂಪರ್ಕ ನಿಷ್ಕೃಯ ಆಗಿದು, ಇದರಿಂದ ಆಡಳಿತ ಸೌಧಕ್ಕೆ ಈಗ ಕತ್ತಲು ಆವರಿಸಿಕೊಂಡಿದೆ. ಹೀಗಾಗಿ ತಹಶೀಲ್ದಾರ ಶ್ರೀಕೃಷ್ಣ ಕಾಮಕರ್ ತಾಲೂಕಾ ಆಡಳಿತದ ವಾಟ್ಸಫ್ ಗ್ರೂಪ್‌ನಲ್ಲಿ ತಿಳಿಸಿದ ಬಗ್ಗೆ ಮಾಹಿತಿ ಲಭ್ಯವಾಗಿದೆ.  ಜೊತೆಗೆ ಗಡುಗು ಸಿಡಿಲಿನ ಆರ್ಭಟದಿಂದ ತಾಲೂಕಿನ ಅನೇಕ ಕಡೆ ವಿದ್ಯುತ್ ವಾಹಕಗಳು ಸುಟ್ಟುಹೋಗಿದ್ದರಿಂದ ತಾಲೂಕಿ ಅನೇಕ ಭಾಗಗಳಿಗೆ ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಇದನ್ನು ಸರಿಪಡಿಸಲು ಕುಮಟಾ ಹೆಸ್ಮಾಂ ಸಿಬ್ಬಂದಿಗಳು ಕಾಯ್ರ ಪ್ರವೃತ್ತರಾಗಿದ್ದಾರೆ.

Please Share: