ಕರಾವಳಿ ವಾಯ್ಸ್ ನ್ಯೂಸ್

ಕಾಣಕೋಣ: ಗೋವಾದ ಮಾಷೆಂ ಬಳಿ ನಡೆದ ಭೀಕರ ಅಪಘಾತದಲ್ಲಿ ಕಾರವಾರದ ಕ್ರಿಮ್ಸ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿ, ಮತ್ತೊಬ್ಬ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದಾನೆ.

ಮೃತ ವಿದ್ಯಾರ್ಥಿಯನ್ನು ಕ್ರಿಮ್ಸ್ ಎಂಬಿಬಿಎಸ್ ಮೂರನೇ ವರ್ಷದ ವಿದ್ಯಾರ್ಥಿ ಆದರ್ಶ ಪುಜಾರಿ (23) ಎಂದು ಗುರುತಿಸಲಾಗಿದ್ದು, ಗಾಯಗೊಂಡ ವಿದ್ಯಾರ್ಥಿ ರೌನಕ್ ಚಾವ್ಲಾ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮಂಗಳವಾರ ರಾತ್ರಿ ಇಬ್ಬರೂ ಕಾಣಕೋಣದಿಂದ ಕಾರವಾರದತ್ತ ರಾಯಲ್ ಎನ್‌ಫೀಲ್ಡ್ (GA 49 EC 2998) ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ, ಮಾಷೆಂ ಹತ್ತಿರದ ರಸ್ತೆಯಲ್ಲಿ ಏಕಾಏಕಿ ಎಮ್ಮೆ ಅಡ್ಡ ಬಂದ ಪರಿಣಾಮ ಬೈಕ್ ಸ್ಲಿಪ್ ಆಗಿ ಇಬ್ಬರೂ ಬಿದ್ದು ಭಾರೀ ಗಾಯಗೊಂಡಿದ್ದಾರೆ.

ಸ್ಥಳೀಯರ ನೆರವಿನಿಂದ ಅವರನ್ನು ತಕ್ಷಣವೇ ಕಾಣಕೋಣ ಸಮುದಾಯ ಆರೋಗ್ಯ ಕೇಂದ್ರಕ್ಕೆ (CHC) ಸಾಗಿಸಲಾಯಿತು. ಆದರೆ ವೈದ್ಯರು ಆದರ್ಶ ಪುಜಾರಿಯನ್ನು ಮೃತರೆಂದು ಘೋಷಿಸಿದರು.

ಮಾಹಿತಿಯ ಪ್ರಕಾರ, ಇಬ್ಬರು ವಿದ್ಯಾರ್ಥಿಗಳು ಮಂಗಳವಾರ ರಾತ್ರಿ ಕಾರವಾರದಿಂದ ಕಾಣಕೋಣಕ್ಕೆ ಊಟಕ್ಕೆ ತೆರಳಿ, ಹಿಂತಿರುಗುವಾಗ ಅಪಘಾತ ಸಂಭವಿಸಿದೆ. ಮೃತ ವಿದ್ಯಾರ್ಥಿ  ಶವವನ್ನು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಕ್ಕೆ ಹಸ್ತಾಂತರಿಸಲಾಗಿದ್ದು, ಗಾಯಾಳು ರೌನಕ್ ಚಾವ್ಲಾವನ್ನು ಕಾರವಾರ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ವಿದ್ಯಾರ್ಥಿ ಬೆಳಗಾವಿ ಗೋಕಾಕ್ ಮೂಲದವರು ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಹೆಡ್ ಕಾನ್ಸ್‌ಟೇಬಲ್ ಆನಂದ ಕುಶಾಳಿ ಪಾಗಿ ಹಾಗೂ ಸಿಬ್ಬಂದಿಗಳು ತೆರಳಿ ಸ್ಥಳ ಪರಿಶೀಲನೆ ನಡೆಸಿದರು. ರಸ್ತೆ ಬದಿಯಲ್ಲಿ ಬೈಕ್ ಹಾಗೂ ಸತ್ತ ಎಮ್ಮೆ ಪತ್ತೆಯಾಗಿದ್ದು, ಕಾಣಕೋಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

 

Please Share: