ಕಾರವಾರ: ನಗರ ಸೇರಿದಂತೆ ತಾಲೂಕಿನ ಕೆಲವು ಪಂಚಾಯತ್ ವ್ಯಾಪ್ತಿಯಲ್ಲಿ ಮಿತಿ ಮೀರಿದ ಓಸಿ ಮಟ್ಕಾ ಹಾವಳಿ ವ್ಯಾಪಕವಾಗಿ ಜೋರಾಗಿದೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿವೆ.
ಕಾರವಾರ ನಗರ, ಸಿದ್ದರ, ಕಿನ್ನರ ಹಾಗೂ ಬೈತಕೂಲ್ ಪ್ರದೇಶಗಳಲ್ಲಿ ಓಸಿ ಮಟ್ಕಾ ಆಟ ದಿನದಿಂದ ದಿನಕ್ಕೆ ವೇಗ ಪಡೆದುಕೊಂಡಿದ್ದು, ನಗರದಲ್ಲಿಯೇ ಕನಿಷ್ಠ ಮೂರು ಬೃಹತ್ ಓಸಿ ಬುಕ್ಕಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪೊಲೀಸರಿಗೆ ಈ ಬಗ್ಗೆ ಸುಳಿವು ಸಿಕ್ಕಿದೆಯೋ ಇಲ್ಲವೋ ತಿಳಿಯದಿದ್ದರೂ, ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಓಸಿ ಮಟ್ಕಾ ಹಾವಳಿಯಿಂದ ಹಲವಾರು ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಬೀದಿ ಪಾಲಾಗುವ ಆತಂಕ ಹೆಚ್ಚುತ್ತಿರುವುದರಿಂದ, ತಕ್ಷಣವೇ ಪೊಲೀಸರು ಚುರುಕಾಗಿ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯ ವ್ಯಕ್ತಪಡಿಸಿದ್ದಾರೆ.


