ಅಂಕೋಲಾ: ತಾಲೂಕಿನ ಅವರ್ಸಾದಲ್ಲಿ ಬುಧವಾರ ನಡೆದ ದಾಳಿಯಲ್ಲಿ ಆಹಾರ ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಅಕ್ರಮ ದಾಸ್ತಾನು ಪತ್ತೆಹಚ್ಚಿ ಶಾಕ್ ನೀಡಿದ್ದಾರೆ.
ಜಿಲ್ಲಾಧಿಕಾರಿಗಳಿಗೆ ದೂರು ಬಂದ ಹಿನ್ನೆಲೆಯಲ್ಲಿ ಉಪ ನಿರ್ದೇಶಕ ಮಂಜುನಾಥ ರೇವಣಕರ ಅವರ ನೇತೃತ್ವದಲ್ಲಿ ತಂಡವು ಸ್ಥಳೀಯ ಓರ್ವರ ಮೇಲೆ ದಾಳಿ ನಡೆಸಿತು. ಪರಿಶೀಲನೆ ವೇಳೆ ಕಾನೂನು ಬಾಹಿರವಾಗಿ ಸಿಲಿಂಡರ್‌ಗಳನ್ನು ಸಂಗ್ರಹಿಸಿರುವುದು ಪತ್ತೆಯಾಗಿದೆ.
ಎಲ್‌ಪಿಜಿ ಕಂಟ್ರೋಲ್ ಕಾಯ್ದೆಯ ಪ್ರಕಾರ ಏಳು ಸಿಲಿಂಡರ್‌ಗಳಿಗಿಂತ ಹೆಚ್ಚು ದಾಸ್ತಾನು ನಿಷಿದ್ಧ. ಆದರೆ ಆರೋಪಿಯು ಯಾವುದೇ ಗ್ಯಾಸ್ ಏಜೆನ್ಸಿ ಅಥವಾ ಡಿಸ್ಟ್ರಿಬ್ಯುಟರ್ ಅಲ್ಲವೆಂಬುದು ಅಧಿಕಾರಿಗಳ ಪರಿಶೀಲನೆಯಲ್ಲಿ ದೃಢಪಟ್ಟಿದೆ.
ಈ ಪ್ರಕರಣದ ಕುರಿತು ಉಪವಿಭಾಗಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಂಕೋಲಾ ಆಹಾರ ನಿರೀಕ್ಷಕರು ತಿಳಿಸಿದ್ದಾರೆ.


