ಕರಾವಳಿ ವಾಯ್ಸ್ ನ್ಯೂಸ್
ಭಟ್ಕಳ: ರಾಷ್ಟ್ರೀಯ ಹೆದ್ದಾರಿ-66 ರ ತೆಂಗಿನಗುಡಿ ಕ್ರಾಸ್ ಬಳಿ ಬುಧವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತ ಸ್ಥಳೀಯರಲ್ಲಿ ಬೆಚ್ಚಿ ಬೀಳುವಂತಾಗಿದೆ. ಅಲಿ ಪಬ್ಲಿಕ್ ಶಾಲೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿ ಮಹಮ್ಮದ್ (18) ಸ್ಥಳದಲ್ಲೇ ದುರ್ಮರಣ ಕಂಡಿದ್ದಾನೆ.
ಮಹಮ್ಮದ್ ಫಿರ್ದೋಸ್ ನಗರ ನಿವಾಸಿಯಾಗಿದ್ದು, ತಂದೆ ಮಹಮ್ಮದ್ ಅನಿಸ್ ಮೊತಶ್ಯಾಮ್. ಆತ ಸುಜುಕಿ ಬರ್ಗಮನ್ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ, ಕುಂದಾಪುರದಿಂದ ಹೊನ್ನಾವರ ದಿಕ್ಕಿಗೆ ಅತಿವೇಗದಲ್ಲಿ ಬರುತ್ತಿದ್ದ ಕೇರಳ ಮೂಲದ ಲಾರಿ ಸ್ಕೂಟರ್‌ಗೆ ಬಲವಾಗಿ ಡಿಕ್ಕಿ ಹೊಡೆದಿದೆ.
ಭೀಕರ ಹೊಡೆತದಿಂದ ಮಹಮ್ಮದ್ ರಸ್ತೆ ಬದಿಗೆ ಎಸೆದು ಬಿದ್ದಿದ್ದು, ಲಾರಿಯ ಹಿಂಬದಿ ಚಕ್ರ ತಲೆಯ ಮೇಲೆ ಹತ್ತಿದ ಪರಿಣಾಮ ಸ್ಥಳದಲ್ಲೇ ಸಾವು ಸಂಭವಿಸಿದೆ.
ಅಪಘಾತಕ್ಕೆ ಕಾರಣವಾದ ಲಾರಿಯನ್ನು ಕೇರಳದ ಅಭಿಲಾಶ್ ಕುಮಾರ (ತಂದೆ ಬಾಲಕೃಷ್ಣ ಪಿಲೈ) ಎಂಬಾತ ಚಾಲನೆ ಮಾಡುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಮೃತನ ಸಂಬಂಧಿ ನವೀದ್ ಅಹಮ್ಮದ್ ದೂರು ನೀಡಿದ್ದು, ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.


