ಹೊನ್ನಾವರ: ತಾಲೂಕಿನ ಕುದ್ರಿಗಿ ತೂಗು ಸೇತುವೆ ಬಳಿ ಕ್ಷುಲ್ಲಕ ಕಾರಣದಿಂದ ನಡೆದ ಜಗಳವು ಚಾಕು ಇರಿತಕ್ಕೆ ಕಾರಣವಾಗಿದ್ದು, ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಗೊಂಡ ಯುವಕನನ್ನು ಕುದ್ರಿಗಿಯ ನಿವಾಸಿ ವಿವೇಕ್ ನಾಯ್ಕ ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಅದ್ಘಾನ್ ಸಂಶಿ ಎಂಬ ಯುವಕ ವಿವೇಕ್ ಮೇಲೆ ಚಾಕು ಇರಿತ ನಡೆಸಿದ್ದು, ಈ ಘಟನೆ ಬಳಿಕ ವಿವೇಕ್ ನಾಯ್ಕ ತೀವ್ರ ಗಾಯಗೊಂಡಿದ್ದಾರೆ.
ಘಟನೆ ಬಗ್ಗೆ ಸ್ಥಳೀಯರು ಮತ್ತು ಹೊನ್ನಾವರ ಠಾಣೆಯ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಗಾಯಗೊಂಡ ವಿವೇಕ್ ನಾಯ್ಕನನ್ನು ಮೊದಲು ಹೊನ್ನಾವರ ತಾಲೂಕು ಆಸ್ಪತ್ರೆಗೆ ದಾಖಲಿಸಿದ ನಂತರ, ಹೆಚ್ಚಿನ ಚಿಕಿತ್ಸೆಗೆ ಉಡುಪಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಹೊನ್ನಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.


