ಶಿರಸಿ:ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ಟಿ. ನಾಯ್ಕರ ಹಿರಿಯ ಸಹೋದರ ಲಿಂಗಪ್ಪ ಟಿ. ನಾಯ್ಕ (63) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ತಾಲೂಕಿನ ಮಳಲಗಾಂವ್ ಮೂಲದವರಾದ ಮೃತರು ಪತ್ನಿ, ಮೂವರು ಪುತ್ರರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಸಹೋದರನ ನಿಧನದ ಸುದ್ದಿ ತಿಳಿದ ಶಾಸಕರು, ಕರ್ತವ್ಯದ ನಿಮಿತ್ತ ಬೆಂಗಳೂರಿನಲ್ಲಿ ಇದ್ದುದರಿಂದ ತಕ್ಷಣವೇ ಶಿರಸಿಗೆ ಮರಳಿದ್ದಾರೆ ಎಂದು ಮೂಲಗಳು ತಿಳಿಸಿದೆ.

 

 

Please Share: