ಕರಾವಳಿ ವಾಯ್ಸ್ ನ್ಯೂಸ್
ಭಟ್ಕಳ: ಮದುವೆ ಸಡಗರದ ಸಿದ್ಧತೆಗಳ ನಡುವೆ, ಚಿನ್ನ ಖರೀದಿಗಾಗಿ ಬಂದಿದ್ದ ಯುವಕನೊಬ್ಬ ರಹಸ್ಯವಾಗಿ ನಾಪತ್ತೆಯಾಗಿರುವ ಘಟನೆ ಭಟ್ಕಳದಲ್ಲಿ ಬೆಳಕಿಗೆ ಬಂದಿದೆ.
ಕುಮಟಾ ತಾಲೂಕಿನ ಮದ್ಗುಣಿ, ಹಳ್ಳಾರ, ಚಿತ್ರಗಿ ನಿವಾಸಿ ಜಾಕೀರ ಬೇಗ (32) ಎಂಬ ಯುವಕ ಮದುವೆ ನಿಮಿತ್ತ ವಿದೇಶದಿಂದ ಊರಿಗೆ ಬಂದಿದ್ದ. ಶುಕ್ರವಾರ (ಅ.18) ಅಣ್ಣನ ಹೆಂಡತಿ ಮತ್ತು ಅಣ್ಣನ ಮಗಳೊಂದಿಗೆ ಚಿನ್ನಾಭರಣ ಖರೀದಿಸಲು ಭಟ್ಕಳಕ್ಕೆ ತೆರಳಿದ ಜಾಕೀರ, ನೂರಪಳ್ಳಿ ಮಸೀದಿಯಲ್ಲಿ ನಮಾಜ್ ಮುಗಿಸಿದ ನಂತರ ಹೊರಗೆ ಬಂದರೂ – ನಂತರದಿಂದ ಕಾಣೆಯಾಗಿದ್ದಾರೆ!
ಮಧ್ಯಾಹ್ನ ಸುಮಾರು 1:15ರ ಸುಮಾರಿಗೆ ಮಸೀದಿಯಿಂದ ಹೊರಬಂದ ಜಾಕೀರ ಬೇಗ ಅವರು ಕುಟುಂಬದವರಿಗೂ ತಿಳಿಸದೆ ಅಜ್ಞಾತ ದಿಕ್ಕಿನಲ್ಲಿ ತೆರಳಿದರೆಂಬ ಮಾಹಿತಿ ಲಭ್ಯವಾಗಿದೆ.
ತಮ್ಮನಾದ ಗಫೂರ್ ಬೇಗ ಅವರು ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಕುರಿತು ದೂರು ದಾಖಲಿಸಿದ್ದು, “ಮದುವೆ ಮೊದಲು ಇಂತಹ ಘಟನೆ ಸಂಭವಿಸಿದೆ ಎಂಬುದು ನಂಬಲಾರದ ವಿಷಯ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶೋಧ ಕಾರ್ಯ ಆರಂಭಿಸಿದ್ದಾರೆ. ನಗರದ ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲನೆಗೆ ಒಳಪಡಿಸಲಾಗಿದೆ.
ಸ್ಥಳೀಯರು ಈ ಘಟನೆ ಕುರಿತು ಚರ್ಚೆ ನಡೆಸುತ್ತಿದ್ದು —“ಮದುವೆ ಮುನ್ನವೇ ವರ ನಾಪತ್ತೆ… ಇದರ ಹಿಂದೆ ಏನಿದೆ?” ಎಂಬ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿ ಮೂಡಿದೆ!


