ಕಾರವಾರ: ನಗರದ ಬಾಡದಲ್ಲಿ ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರು ಹಾಸ್ಟೆಲ್ ಅವ್ಯವಸ್ಥೆ ವಿರುದ್ಧ ರಾತ್ರಿ ದಿಢೀರ್ ಪ್ರತಿಭಟನೆ ನಡೆಸಿದರು. ವಸತಿ ನಿಲಯದ ಹೊರಗೆ ಕುಳಿತು ಅವರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ವಿದ್ಯಾರ್ಥಿನಿಯರು ಹಾಸ್ಟೆಲ್‌ನಲ್ಲಿ ಸಮರ್ಪಕ ಊಟ ನೀಡದಿರುವುದು, ಕೊಳೆತ ತರಕಾರಿ ಬಳಕೆ, ಮತ್ತು ಶೌಚಾಲಯದ ಸ್ವಚ್ಛತೆಗಾಗಿ ಅವರಿಗೆ ಕೆಲಸ ಮಾಡಿಸುವ ಬಗ್ಗೆ ಆರೋಪಿಸಿದರು. ಮುಖ್ಯವಾಗಿ, ವಾರ್ಡನ್ ಮಂಜುಳ ವಿರುದ್ಧ ತಮ್ಮ ತೀವೃ ಆಕ್ರೋಶವನ್ನು ವ್ಯಕ್ತಪಡಿಸಿದರು.

ಸ್ಥಳಕ್ಕೆ ಕಾರವಾರದ ತಹಶೀಲ್ದಾರ್ ನಿಶ್ಚಲ್ ನೊರೊನ್ಹಾ, ಹಿಂದುಳಿದ ವರ್ಗ ಕಲ್ಯಾಣ ಇಲಾಖೆಯ ಉಪ-ನಿರ್ದೇಶಕಿ ಶಿವಕ್ಕ ಮಾದರ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಅಧಿಕಾರಿಗಳು ವಾರ್ಡನ್ ಮಂಜುಳಿಗೆ ನೋಟೀಸ್ ನೀಡಿದರು ಮತ್ತು ಹಾಸ್ಟೆಲ್‌ನಲ್ಲಿ ಸ್ವಚ್ಛತೆ ಮತ್ತು ಉತ್ತಮ ಊಟೋಪಚಾರ ವ್ಯವಸ್ಥೆ ಮಾಡಲಾಗುವುದಾಗಿ ಭರವಸೆ ನೀಡಿದರು.

 

Please Share: