ಕರಾವಳಿ ವಾಯ್ಸ್ ನ್ಯೂಸ್
ಜೋಯಿಡಾ: ಗೋವಾ ಕಡೆಗೆ ಹೊರಟಿದ್ದ ರೈಲಿನಲ್ಲಿ ಗಾಂಜಾ ಸಾಗಾಟದ ಡ್ರಾಮಾ ಬೆಳಕಿಗೆ ಬಂದಿದೆ! ಲೊಂಡಾ ರೈಲು ನಿಲ್ದಾಣದಲ್ಲಿ ನಡೆದ ತಪಾಸಣೆಯಲ್ಲಿ ಪೊಲೀಸರು 5 ಕೆಜಿ 591 ಗ್ರಾಂ ಗಾಂಜಾ ವಶಪಡಿಸಿಕೊಂಡು, ಝಾರ್ಖಂಡ್ ಮೂಲದ ಪರಶುರಾಮ ಮೆಥ್ಯೂ ಎಂಬಾತನನ್ನು ಬಂಧಿಸಿದ್ದಾರೆ.
ನಿಖರ ಮಾಹಿತಿಯ ಆಧಾರದ ಮೇಲೆ ನಡೆದ ಈ ದಾಳಿ ವೇಳೆ, ಆರೋಪಿಯಿಂದ ರೂ. 55,910 ಮೌಲ್ಯದ ನಿಷೇಧಿತ ವಸ್ತು ಸಿಕ್ಕಿದ್ದು, ಬೆಳಗಾವಿ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಲೊಂಡಾ ಮೂಲಕ ಗೋವಾ ಕಡೆ ದೊಡ್ಡ ಪ್ರಮಾಣದಲ್ಲಿ ಗಾಂಜಾ ಸರಕು ಮಾರಾಟ ನಡೆಯುತ್ತಿದೆ ಎಂಬ ಮಾಹಿತಿ ದೊರೆತಿದ್ದು, ಬೆಳಗಾವಿ ಪೊಲೀಸರು ಈಗ ಈ ಜಾಲದ ಹಿಂದಿರುವವರತ್ತ ತನಿಖೆ ಕಣ್ಣಿಟ್ಟಿದ್ದಾರೆ.
ರೈಲಿನಲ್ಲಿ ನಿಷೇಧಿತ ವಸ್ತು ಸಾಗಾಟ – ಪೊಲೀಸರ ಸೂಕ್ಷ್ಮ ಕಾರ್ಯಾಚರಣೆ ಮತ್ತೆ ಸದ್ದು ಮಾಡಿಸಿದೆ!


