ಕರಾವಳಿ ವಾಯ್ಸ್ ನ್ಯೂಸ್

ಕಾರವಾರ: ತಾಲೂಕಿನ ಸದಾಶಿವಗಡ ಟೋಲನಾಕಾ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ಯುವಕರು ಗಾಂಜಾ ಮಾದಕ ವಸ್ತುವನ್ನು ಸೇವಿಸಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಾನುವಾರ (ಅಕ್ಟೋಬರ್ 12) ಸಂಜೆ ಸುಮಾರು 4 ಗಂಟೆ ಸುಮಾರಿಗೆ, ಗಜಾನನ ವಿಶ್ವನಾಥ ಗುರವ (19) ಎಂಬ ಯುವಕ ಹಾಗೂ ಸಂಜೆ 4.30 ಗಂಟೆ ಸುಮಾರಿಗೆ ಸೂರಜ್ ನರೇಶ್ ಪೂಜಾರಿ (21) ಎಂಬ ಮತ್ತೊಬ್ಬ ಯುವಕ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಪೊಲೀಸರು ಇಬ್ಬರನ್ನೂ ತಕ್ಷಣ ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದು, ಟೆಟ್ರಾಹೈಡ್ರೋಕ್ಯಾನಾಬಿನಾಲ್ (THC) ಪತ್ತೆ ಪರೀಕ್ಷೆಯ ಫಲಿತಾಂಶ ಪಾಸಿಟಿವ್ ಎಂದು ವೈದ್ಯಾಧಿಕಾರಿಗಳ ವರದಿ ತಿಳಿಸಿದೆ.

ಈ ಹಿನ್ನೆಲೆಯಲ್ಲಿ, ಇಬ್ಬರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯ ಕಲಂ 27(b) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ಚಿತ್ತಾಕುಲಾ ಪೊಲೀಸರು ಕೈಗೊಂಡಿದ್ದಾರೆ.

 

 

Please Share: