ಕರಾವಳಿ ವಾಯ್ಸ್ ನ್ಯೂಸ್

ದಾಂಡೇಲಿ/ಶಿರಸಿ: ದೀಪಾವಳಿಯ ಬೆಳಕಿನ ನಡುವೆ ಕತ್ತಲಲ್ಲಿ ಇಸ್ಪೀಟ್ ಅಡ್ಡೆ! ಹಬ್ಬದ ಸಂಭ್ರಮದ ಹೆಸರಲ್ಲಿ ಕೆಲವರು ನೋಟುಗಳ ಆಟವಾಡುತ್ತಿದ್ದರೆ, ಪೊಲೀಸರ ಅಚಾನಕ್‌ ದಾಳಿ ಜೂಜಾಟಗಾರರಿಗೆ ಕಂಟಕವಾಯಿತು.

ದಾಂಡೇಲಿಯ ಸಹೇಲಿ ಲಾಡ್ಜ್ ಹಿಂಭಾಗದಲ್ಲೇ ರಾತ್ರಿ 11 ಗಂಟೆಗೆ ಪೊಲೀಸರು ಬಿರುಸಿನ ದಾಳಿ ನಡೆಸಿ, ಅಕ್ರಮವಾಗಿ ಇಸ್ಪೀಟ್ ಆಡುತ್ತಿದ್ದ ಆರು ಜನರನ್ನು ಬಲೆಗೆ ಸೆಳೆದಿದ್ದಾರೆ.

ವಶವಾದವರು: ಸುಭಾಷನಗರದ ಅಸ್ಲಾಂ ಕಾಸಿಂಸಾಬ್ ನೀರಲಗಿ, ದಾವಲ್ ಸಾಬ್ ಕಾಸಿಂಸಾಬ್ ನೀರಲಗಿ, ಗಾಂಧಿನಗರದ ಮಂಜುನಾಥ ವೀರಭದ್ರ ಹರಿಜನ, ರಿಜ್ವಾನ್ ಅಬ್ದುಲ್ ನದಾಫ್, ಬಾಲರಾಜ ನಾಗೇಶ ಗಿರಿಯಾಳ ಹಾಗೂ ಮಹಮ್ಮದ್ ರಜಾಕ್ ಸತ್ತಾರ್ ತಹಶೀಲ್ದಾರ್.

ಪೊಲೀಸರು ₹3,500 ನಗದು, ಇಸ್ಪೀಟ್ ಎಲೆಗಳು ಮತ್ತು ಜೂಜಾಟ ಸಲಕರಣೆಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಕಾರ್ಯಾಚರಣೆ ದಾಂಡೇಲಿ ನಗರ ಠಾಣೆಯ ಪಿಎಸ್ಐ ಅಮೀನ್ ಸಾಬ್ ಅತ್ತಾರ್ ನೇತೃತ್ವದಲ್ಲಿ ನಡೆದಿದ್ದು, ಮುಂದಿನ ತನಿಖೆ ಮುಂದುವರಿದಿದೆ.

ಶಿರಸಿಯ ಕ್ರಿಡಾಂಗಣದ ಎದುರು “ಅಂದರ್-ಬಾಹರ್” ಆಟದ ಪತ್ತೆ!

ನಗರದ ಮಾರಿಕಾಂಬಾ ಕ್ರೀಡಾಂಗಣದ ಎದುರಿನ ಸಾರ್ವಜನಿಕ ಸ್ಥಳದಲ್ಲೇ ನಾಲ್ವರು “ಅಂದರ್-ಬಾಹರ್” ಇಸ್ಪೀಟ್‌ನಲ್ಲಿ ತೊಡಗಿದ್ದರು!

ಪಿಎಸ್‌ಐ ಬಸವರಾಜ ಕನಶೆಟ್ಟಿ ನೇತೃತ್ವದ ದಾಳಿಯಲ್ಲಿ ₹3,600 ನಗದು, ಇಸ್ಪೀಟ್ ಎಲೆಗಳು ಮತ್ತು ಟವೆಲ್ ವಶ.

ವಶರಾದವರು: ಮೊಹಮ್ಮದ್ ಅನ್ವರ ಮನಿಯಾರ, ನೂರಸಾಬ್ ಬೆಲೇರಿ, ರಾಮು ಮಾನೇನ್ನವರ ಹಾಗೂ ದಿನೇಶ ಗೌಳಿ.

ನವಗ್ರಾಮದಲ್ಲಿ ಅಡ್ಡೆ – ಎಂಟು ಮಂದಿ ಬಲೆಗೆ!

ಬನವಾಸಿಯ ದನಗನಹಳ್ಳಿಯ ನವಗ್ರಾಮದ ಖಾಲಿ ಜಾಗದಲ್ಲೂ ಅಂದರ್-ಬಾಹರ್ ಅಡ್ಡೆ ಬಿಚ್ಚಿಟ್ಟಿತ್ತು!

ಪಿಎಸ್‌ಐ ಮಹಾಂತಪ್ಪ ಕುಂಬಾರ ನೇತೃತ್ವದ ದಾಳಿಯಲ್ಲಿ ಎಂಟು ಮಂದಿ ಬಂಧನ.

ಸ್ಥಳದಿಂದ ₹2,570 ನಗದು, ಇಸ್ಪೀಟ್ ಎಲೆಗಳು ಹಾಗೂ ಪ್ಲಾಸ್ಟಿಕ್ ತಾಡಪಲ್ ವಶ.

ಬಂಧಿತರ ಪಟ್ಟಿ: ಬಸವರಾಜ ಕಚವೆ, ರಾಜು ರಾಮಾಪುರ, ಸುರೇಶ್ ಗೊಯಕರ, ನಾಗರಾಜ ಪಾಟೀಲ, ಮಾಂತೇಶ ಗೊಯಕರ, ಹಜರತ್ ಅಲಿ ಬಾಳಿಂಬಿಡ, ಸಂದೀಪ ರಾಮಾಪುರ ಹಾಗೂ ಸುರೇಶ್ ರಾಮಾಪುರ.

“ಹಬ್ಬದ ಸಂಭ್ರಮಕ್ಕೆ ಕಾನೂನಿನ ಸಿಕ್ಕು!”

ಪೊಲೀಸರ ಕ್ರಮದಿಂದಾಗಿ ಅಕ್ರಮ ಜೂಜಾಟ ಅಡ್ಡೆಯ ಚಟುವಟಿಕೆ ನಿಶ್ಶಬ್ದವಾಗಿದೆ. ಸ್ಥಳೀಯರು ಹೇಳುವಂತೆ – “ಹಬ್ಬದ ಖುಷಿಯಲ್ಲಿ ಕೆಲವರು ಕಾಸಿನ ಆಟಕ್ಕೆ ಬಿದ್ದು ಕಾನೂನಿನ ಉರುಳಿಗೆ ಸಿಕ್ಕಿದ್ದಾರೆ!”

 

Please Share: