ಕರಾವಳಿ ವಾಯ್ಸ್ ನ್ಯೂಸ್

ಮುಂಡಗೋಡ: ತಾಲ್ಲೂಕಿನ ಕಾತೂರ ವಲಯದ ಬಾಳೆಕೊಪ್ಪ ಹತ್ತಿರ ರವಿವಾರ ಸಂಜೆ ನಡೆದ ಅರಣ್ಯ ದಾಳಿಯಲ್ಲಿ ಜಿಂಕೆ ಚರ್ಮ ಮತ್ತು ಕಾಡುಹಂದಿಯ ಮಾಂಸ ದಾಸ್ತಾನು ಬಯಲಾಗಿದ್ದು, ಐವರು ಆರೋಪಿಗಳು ಬಂಧಿತರಾಗಿದ್ದಾರೆ.

ಕಾತೂರ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ, ಖಚಿತ ಗುಪ್ತಚರ ಮಾಹಿತಿ ಆಧರಿಸಿ ನಡೆದ ದಾಳಿಯಲ್ಲಿ ಎರಡು ಬೈಕುಗಳಲ್ಲಿ ಜಿಂಕೆ ಚರ್ಮ ಮತ್ತು ಸುಮಾರು 3.9 ಕೆ.ಜಿ. ಕಾಡುಹಂದಿಯ ಮಾಂಸವನ್ನು ಸಾಗಿಸಲಾಗುತ್ತಿತ್ತು. ಸ್ಥಳದಲ್ಲೇ ಐವರನ್ನು ಬಂಧಿಸಿ ವನ್ಯಜೀವಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರಾಗಿ **ಕನಕಪ್ಪ ಮಾದರ, ಸಾಕಿನ್ ಬಾಳೆಕೊಪ್ಪ, ಪರಶುರಾಮ ಮಾದರ್, ಸುರೇಶ್ (ದೇವಪ್ಪ), ಶಿವಪುತ್ರಪ್ಪ ಬಿನ್ (ಹನುಮಂತಪ್ಪ) ಮತ್ತು ಉಮೇಶ್ ಬಿನ್ (ಗುಡ್ಡಪ್ಪ)**ರನ್ನು ಗುರುತಿಸಲಾಗಿದೆ.

ಘಟನೆಯ ಕುರಿತು ಮಾತನಾಡಿದ ಕಾತೂರ ವಲಯ ಅರಣ್ಯ ಅಧಿಕಾರಿ ವಿರೇಶ, “ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಕ್ರಮ ಕೈಗೊಂಡಿದ್ದೇವೆ,” ಎಂದು ತಿಳಿಸಿದ್ದಾರೆ.

ಎಸಿಎಫ್ ರವಿ ಹುಲಿಕೋಟ ಅವರ ಮಾರ್ಗದರ್ಶನದಲ್ಲಿ ಅರಣ್ಯ ಅಧಿಕಾರಿ ವಿರೇಶ ಅವರ ನೇತೃತ್ವದಲ್ಲಿ ಕಾತೂರ ವಲಯದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

 

 

Please Share: