ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಗಾಂವಕರವಾಡ ಮಲ್ಲಿಕಾರ್ಜುನ ದೇವಸ್ಥಾನ ಹತ್ತಿರ ಅಚ್ಚರಿಯ ಘಟನೆ ನಡೆದಿದೆ. ಸುಮಾರು 50 ಅಡಿ ಆಳದ ಬಾವಿಗೆ ಎತ್ತು ಬಿದ್ದಿದ್ದು, ಈ ದೃಶ್ಯವನ್ನು ಕಂಡ ಸ್ಥಳೀಯರು ಬೆಚ್ಚಿಬಿದ್ದರು!
ತಕ್ಷಣ ಸ್ಥಳೀಯರಾದ ಶಾಂತರಾಮ ಗಾಂವಕರ ಅವರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು. ಸುದ್ದಿ ತಿಳಿದ ಕ್ಷಣದಲ್ಲೇ ಅಗ್ನಿಶಾಮಕ ಠಾಣಾಧಿಕಾರಿ ಮಹಾಬಲೇಶ್ವರ ಗೌಡ ಅವರ ನೇತೃತ್ವದಲ್ಲಿ ತಂಡ ಸ್ಥಳಕ್ಕಾಗಮಿಸಿದರು.
ರಾಜೇಶ್ ಎಂ. ರಾಣೆ, ವಿನಾಯಕ ಎಂ. ನಾಯ್ಕ, ಟೋನಿ ಅಲೆಕ್ಸ್ ಬಾರಾಭೋಜ, ಪ್ರವೀಣ ಕೆ. ನಾಯ್ಕ, ಕುಮಾರ ಕೆ.ಎಸ್., ಭರತ ಕುಮಾರ ಸೇರಿ ತಂಡದ ಸದಸ್ಯರು ಅಚ್ಚುಕಟ್ಟಾದ ತಂತ್ರದ ಮೂಲಕ ಬಾವಿಯಲ್ಲಿ ಬಿದ್ದ ಎತ್ತನ್ನು ಬದುಕುಳಿಸುವಲ್ಲಿ ಯಶಸ್ವಿಯಾದರು.
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಈ ರೋಮಾಂಚಕಾರಿ ರಕ್ಷಣಾ ಕಾರ್ಯಾಚರಣೆಯನ್ನು ಸ್ಥಳೀಯರು ಉಸಿರೆಳೆದಂತೆ ವೀಕ್ಷಿಸಿದರು. ಕೊನೆಗೆ ಎತ್ತು ಸುರಕ್ಷಿತವಾಗಿ ಹೊರಬಂದಾಗ ಎಲ್ಲರೂ ಚಪ್ಪಾಳೆ ಹೊಡೆದು ಅಭಿನಂದಿಸಿದರು!


