ಯಲ್ಲಾಪುರ :  ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಪ ಸೋಮವಾರ ತಡ ರಾತ್ರಿ ಕಾರೊಂದು ಸುಟ್ಟು ಬಸ್ಮವಾದ ಘಟನೆ ತಾಲೂಕಿನ ಅರಬೈಲ್ ಘಟ್ಟದಲ್ಲಿ‌ ಸಂಭವಿಸಿದೆ.

ರೂಪೇಶ ನಾಯ್ಕ ಎಂಬವರು ತಮ್ಮ‌ ಡಸ್ಟರ್‌ ಕಾರಿನಲ್ಲಿ ಸೋಮವಾರ ತಡ ರಾತ್ರಿ ಕುಮಟಾಕ್ಕೆ ತೆರಳುತ್ತಿರುವಾಗ ಘಟನೆ ನಡೆದಿದೆ. ಈ ವೇಳೆ  ಚಾಲಕ‌ನ ನಿಯಂತ್ರಣ  ತಪ್ಪಿದ ಕಾರು ಅರಬೈಲ ಘಟ್ಟದ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಶಾರ್ಟ ಸರ್ಕೀಟ್ ನಿಂದ ಕಾರಿಗೆ ಬೆಂಕಿ ತಗುಲಿದೆ. ತಕ್ಷಣ ಕಾರಿನಲ್ಲಿದ್ದ ಇಬ್ಬರೂ ಪಾರಾಗಿದ್ದು  ಅಪಾಯ ಸಂಭವಿಸಿಲ್ಲ. ವಿಷಯ ತಿಳಿದ ತಕ್ಷಣ ಪೊಲೀಸರು ಹಾಗೂ ಅಗ್ನಿಶಾಮಕ‌ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ. ಈ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Please Share: