ಉತ್ತರ ಕನ್ನಡ ಜಿಲ್ಲೆಯಲ್ಲಿ ವಿದೇಶಗಳಿಗೆ ತಮ್ಮ ಉತ್ಪನ್ನಗಳನ್ನು ರಫ್ತು ಮಾಡುವ ನಿರೀಕ್ಷಿತ ಸಂಖ್ಯೆಯ ಉದ್ದಿಮೆಗಳಿಲ್ಲ ಎನ್ನುವ ದೂರಿಗೆ ಅಪವಾದವೆಂಬAತೆ, ಜಿಲ್ಲೆಯಿಂದ ವಿದೇಶಗಳಿಗೆ ಸ್ಥಳೀಯ ಉತ್ಪನ್ನಗಳನ್ನು ರಪ್ತು ಮಾಡುವ ಮೊತ್ತದ ಪ್ರಮಾಣ ಅಧಿಕವಾಗುತ್ತಿದ್ದು, 2023-24 ರಲ್ಲಿ ರೂ.156.34 ಕೋಟಿ ಮೊತ್ತದ ಉತ್ಪನ್ನಗಳನ್ನು ರಪ್ತು ಮಾಡಿದ್ದು 2024-25 ರಲ್ಲಿ ಇದರ ಪ್ರಮಾಣ ರೂ.101.57 ಕೋಟಿಯಾಗಿದೆ.

ಜಿಲ್ಲೆಯಲ್ಲಿನ ರಪ್ತುದಾರರು ನೀಡಿದ ಮಾಹಿತಿಯಂತೆ, 2023-24 ರಲ್ಲಿ ಲೇಖನ ಸಾಮಗ್ರಿ ಉತ್ಪನ್ನಗಳಲ್ಲಿ 2297 ಮೆ.ಟನ್, ಕಾಫಿ ಅರೆಬಿಕ ಚರ‍್ರಿ ಮತ್ತು ರೊಬೋಸ್ಟ ಚರ‍್ರಿ 59,600 ಕೆಜಿ, ಸಾವಯವ ಮೆಣಸಿನಕಾಯಿ ಚಕ್ಕೆಗಳು, ಅರಿಶಿಣ, ಕಪ್ಪು ಮತ್ತು ಬಿಳಿ ಮೆಣಸು 28,044 ಕೆಜಿ, ವೆನಿಲ್ಲಾ ಬೀನ್ಸ್ ಮತ್ತು ವೆನಿಲ್ಲಾ ಬೀನ್ಸ್ ಪೌಡರ್ 1677.3 ಕೆ.ಜಿ ಹಾಗೂ ಹರ್ಬಲ್ ಟೀ, ಮಾತ್ರೆಗಳನ್ನು ಪ್ರಮುಖವಾಗಿ ರಪ್ತು ಮಾಡಲಾಗಿದೆ.

2024-25 ರಲ್ಲಿ 7340 ಮೆ.ಟನ್. ಸಕ್ಕರೆ, 2449 ಮೆ.ಟನ್ ಲೇಖನ ಸಾಮಾಗ್ರಿ, 3,11,000 ಕೆ.ಜಿ. ಕಾಫಿ ಅರೆಬಿಕ ಚರ‍್ರಿ ಮತ್ತು ರೊಬೋಸ್ಟ ಚರ‍್ರಿ, 110845 ಕೆಜಿ ಸಾವಯವ ಮೆಣಸಿನಕಾಯಿ ಚಕ್ಕೆಗಳು, ಅರಿಶಿಣ, ಕಪ್ಪು ಮತ್ತು ಬಿಳಿ ಮೆಣಸು , 5358 ಕೆಜಿ ವೆನಿಲ್ಲಾ ಬೀನ್ಸ್ ಮತ್ತು ವೆನಿಲ್ಲಾ ಬೀನ್ ಪೌಡರ್ ಮತ್ತು ಹರ್ಬಲ್ ಟೀ ಯನ್ನು ರಪ್ತು ಮಾಡಲಾಗಿದೆ.

ಈ ಪ್ರಮುಖ ಉತ್ಪನ್ನಗಳನ್ನು ಹೊರತುಪಡಿಸಿ, ಇತರೆ ಹಲವು ಉತ್ಪನ್ನಗಳನ್ನು ಕೂಡಾ ಜಿಲ್ಲೆಯಿಂದ ರಪ್ತು ಮಾಡುತ್ತಿದ್ದು, ವಿದೇಶಿ ವ್ಯಾಪಾರ ನಿರ್ದೇಶನಾಲಯದ ಮಾಹಿತಿಯಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ 230 ಮಂದಿ ರಪ್ತುದಾರರು ನೋಂದಣಿ ಮಾಡಿಕೊಂಡಿದ್ದು, ಈ ರಪ್ತುದಾರರ ವಿವಿಧ ಕುಂದು ಕೊರತೆಗಳ ಬಗ್ಗೆ ಜಿಲ್ಲಾ ಕೈಗಾರಿಕಾ ಇಲಾಖೆಯ ಮೂಲಕ ಸಮಾಲೋಚನೆ ನಡೆಸಲಾಗುತ್ತಿದೆ. ರಪ್ತು ಪ್ರಮಾಣದ ಹೆಚ್ಚಳಕ್ಕೆ ಯೋಜನೆ ರೂಪಿಸಲಾಗುತ್ತಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿನ ರಪ್ತುದಾರರ ಮೂಲಕ ಇಲ್ಲಿನ ಉತ್ಪನ್ನಗಳನ್ನು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ರಪ್ತು ಮಾಡುವ ಕುರಿತಂತೆ ಕೈಗಾರಿಕೆ ಇಲಾಖೆಯ ಮೂಲಕ ಅಗತ್ಯವಿರುವ ಎಲ್ಲಾ ಪ್ರೋತ್ಸಾಹ ನೀಡಲಾಗುವುದು. ಇಲ್ಲಿನ ಉತ್ಪನ್ನಗಳಿಗೆ ಸೂಕ್ತ ರೀತಿಯ ಉತ್ತಮ ಮಾರುಕಟ್ಟೆ ಒದಗಿಸುವ ಮೂಲಕ ಜಿಲ್ಲೆಯಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಯೋಜನೆ ರೂಪಿಸಲಾಗುವುದು.: ನಾಗರಾಜ್ ನಾಯಕ್, ಜಂಟಿ ನಿರ್ದೇಶಕರು , ಜಿಲ್ಲಾ ಕೈಗಾರಿಕಾ ಕೇಂದ್ರ, ಉತ್ತರ ಕನ್ನಡ ಜಿಲ್ಲೆ.

Please Share: