ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಸದಾಶಿವಗಡದ ಜೈ ದುರ್ಗಾಮಾತಾ ಕ್ರೇಡಿಟ್ ಸೌಹಾರ್ದ ಸಹಕಾರಿ ಸಂಘದ ಕೋಟ್ಯಂತರ ರೂಪಾಯಿಗಳ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಲಿಂಗರಾಜು ಪುತ್ತು ಕಲ್ಗುಟ್ಕರ ಬಂಧನಗೊಂಡಿರುವುದು ಇದೀಗ ಅಧಿಕೃತವಾಗಿ ಖಚಿತಗೊಂಡಿದೆ.
ಮಂಗಳವಾರ ಚಿತ್ತಾಕುಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಂಕಣ ಮರಾಠ ಸಭಾಭವನದಲ್ಲಿ ನಡೆದ ವಂಚಿತ ಗ್ರಾಹಕರ ಸಭೆಯಲ್ಲಿ ಸಿಐಡಿ ಅಧಿಕಾರಿಗಳು ಹಾಗೂ ಸಹಕಾರ ಪೆಡರೇಷನ್ ಬೆಂಗಳೂರು ಬಂಧನದ ವಿಷಯವನ್ನು ಸ್ಪಷ್ಟಪಡಿಸಿ ದೃಢೀಕರಿಸಿದರು.
ಸುಮಾರು ₹54 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಆರೋಪಿ ಲಿಂಗರಾಜ ಕಲ್ಗುಟ್ಕರನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ವೈದ್ಯಕೀಯ ಪರೀಕ್ಷೆ ಬಳಿಕ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.
ವಂಚಿತ ಗ್ರಾಹಕರಿಗೆ ತಮ್ಮ ಖಾತೆಯ ಹಣದ ವಿವರ ಹಾಗೂ ದಾಖಲೆಗಳನ್ನು ಸಲ್ಲಿಸಲು ಸೂಚನೆ ನೀಡಲಾಗಿದ್ದು, ಅಗತ್ಯ ಫಾರ್ಮ್‌ಗಳನ್ನು ವಿತರಿಸಲಾಗಿದೆ. ಮೂರು ದಿನಗಳಲ್ಲಿ ದಾಖಲೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಸಿಐಡಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಸಭೆಯಲ್ಲಿ ನೂರಕ್ಕೂ ಹೆಚ್ಚು ವಂಚಿತ ಗ್ರಾಹಕರು ಪಾಲ್ಗೊಂಡಿದ್ದರು.


