ಅಂಕೋಲಾ: ಮದ್ಯದ ಅಮಲಿನಲ್ಲಿ ತಪ್ಪು ದಾರಿಯಲ್ಲಿ ಬಂದ ಗೂಡ್ಸ್‌ ಲಾರಿ ಪಲ್ಟಿಯಾದ ಘಟನೆ ತಾಲೂಕಿನ ಹಾರವಾಡದ ಬಳಿ ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ನಡೆದಿದೆ.

ಮಂಗಳೂರಿನಿಂದ ಗೋವಾ ಕಡೆಗೆ ತೆರಳುತ್ತಿದ್ದ MH 51 C 4448 ನಂಬರ್‌ನ ಪ್ರಿಯಾ ಆಯಿಲ್ ಕಂಪನಿಯ ಅಡುಗೆ ಎಣ್ಣೆ ಸಾಗಾಟದ ಲಾರಿ ಚಾಲಕ ನಿಯಂತ್ರಣ ಕಳೆದುಕೊಂಡು ಏಕಮುಖ ಮಾರ್ಗದಲ್ಲಿ ವಿರುದ್ಧವಾಗಿ ಬಂದು ರಸ್ತೆ ಬದಿಗೆ ಪಲ್ಟಿಯಾಗಿದೆ.

ಅಪಘಾತದಿಂದ ಲಾರಿಯಲ್ಲಿದ್ದ ಎಣ್ಣೆ ರಸ್ತೆಗೆ ಹರಿದು ಬಿದ್ದಿದ್ದು, ಸ್ಥಳದಲ್ಲಿ ಸಂಚಾರ ಕೆಲಕಾಲ ಅಸ್ತವ್ಯಸ್ತಗೊಂಡಿತು. ಈ ವೇಳೆ ಅನಾಮಿಕರು ಲಾರಿಯ ಚೈನ್ ಹಾಗೂ ಕೆಲ ಸಾಮಗ್ರಿಗಳನ್ನು ಕದಿಯುವ ಪ್ರಯತ್ನ ಮಾಡಿದ್ದಾರೆ ಎಂಬ ಕಳ್ಳತನದ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ತಕ್ಷಣ ಅಂಬುಲೆನ್ಸ್ ಆಗಮಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ಅದೃಷ್ಟವಶಾತ್ ಚಾಲಕ ಹಾಗೂ ನಿರ್ವಾಹಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

 

 

 

Please Share: