ಕರಾವಳಿ ವಾಯ್ಸ್ ನ್ಯೂಸ್
ಹಳಿಯಾಳ: ಹಲ್ಲೆ ಮತ್ತು ಅವಮಾನ ಪ್ರಕರಣದಲ್ಲಿ ಕಳೆದ ಆರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಸೋಮನಿಂಗ ನೀಲಕಂಠ ಭಡಂಗಿ ಎಂಬ ಆರೋಪಿ ಕೊನೆಗೂ ಕಾನೂನಿನ ಬಲೆಗೆ ಸಿಕ್ಕಿ ಬಿದ್ದಿದ್ದಾನೆ.
ಹಳಿಯಾಳ ಪೊಲೀಸ್ ಠಾಣೆಯು ವಿಶೇಷ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಸಂಬಂಧಿತ ಪ್ರಕರಣದಲ್ಲಿ ಜಾಮೀನು ಪಡೆದ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ಪರಾರಿಯಾಗಿದ್ದ ಭಡಂಗಿ, ಕಾನೂನಿಗೆ ಸವಾಲು ನೀಡುವಂತೆ ವರ್ತಿಸಿದ್ದಾನೆ.
ನ್ಯಾಯಾಲಯವು ಸಕಲ 40 ಬಾರಿ ವಾರಂಟ್ ಹೊರಡಿಸಿದ್ದರೂ, ಆತ ಪತ್ತೆಯಾಗದೆ ಪೊಲೀಸರು ಸಂಕಷ್ಟಕ್ಕೆ ಸಿಲುಕಿದ್ದರು. ಆರೋಪಿಯ ಬಿನ್ನಾಣಿ ಓಟಕ್ಕೆ ತೆರೆ ಬೀಳಿಸಲು ಹಳಿಯಾಳ ಪೊಲೀಸರು ವಿಶೇಷ ಶೋಧ ತಂಡವನ್ನು ರಚಿಸಿದ್ದರು.
ಸಂಕನಕೊಪ್ಪದಲ್ಲಿ ಸುಳಿವು – ರಾತ್ರಿ ದಾಳಿ
ಆರೋಪಿತನು ಸಂಕನಕೊಪ್ಪ ಗ್ರಾಮದಲ್ಲಿ ತಂಗಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಆಧಾರದ ಮೇಲೆ ತಂಡವೆಲ್ಲಾ ಸನ್ನದ್ಧವಾಗಿ ಕಾರ್ಯಾಚರಣೆ ನಡೆಸಿ ಭಡಂಗಿಯನ್ನು ವಶಕ್ಕೆ ಪಡಿದಿದೆ. ಬಂಧನದ ನಂತರ ಆರೋಪಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಉನ್ನತ ಅಧಿಕಾರಿಗಳ ಮಾರ್ಗದರ್ಶನ – ಸಮನ್ವಯ ಕಾರ್ಯಾಚರಣೆ
ಈ ಕಾರ್ಯಾಚರಣೆಯಲ್ಲಿ ಎಸ್ಪಿ ದೀಪನ್ ಎಂ.ಎನ್., ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಹಾಗೂ ಜಗದೀಶ ನಾಯ್ಕ, ಡಿವೈಎಸ್ಪಿ ಶಿವಾನಂದ ಮದರಕಂಡಿ ಮತ್ತು ಸಿಪಿಐ ಜಯಪಾಲ್ ಪಾಟೀಲ್ ಇವರ ಮಾರ್ಗದರ್ಶನದಲ್ಲಿ, ಪಿಎಸ್‌ಐ ಬಸವರಾಜ ಮಬನೂರ (ಕಾ&ಸು) ಮತ್ತು ಪಿಎಸ್‌ಐ ಕೃಷ್ಣಾ ಅರಕೇರಿ (ತನಿಖೆ) ಅವರ ನೇತೃತ್ವದಲ್ಲಿ ಎಎಸ್‌ಐ ವೆಂಕಟೇಶ ತೆಗ್ಗಿನ, ಸಿಪಿಸಿ ಶ್ರೀಶೈಲ್ ಜಿ.ಎಂ., ಸಿಪಿಸಿ ಲಕ್ಷ್ಮಣ ಪೂಜಾರಿ, ಸಿಪಿಸಿ ಅರವಿಂದ ಭಜಂತ್ರಿ ಮತ್ತು ಸಿಪಿಸಿ ರಾಘವೇಂದ್ರ ಕೆರವಾಡ ಕಾರ್ಯನಿರ್ವಹಿಸಿದರು.
ಬಂಧನ ಕಾರ್ಯಾಚರಣೆ ಯಶಸ್ವಿಯಾಗಲು ಜಿಲ್ಲಾ ಪೊಲೀಸ್ ವ್ಯವಸ್ಥೆಯಿಂದ ಗಟ್ಟಿಯಾದ ಮಾರ್ಗದರ್ಶನ ದೊರಕಿದ್ದು, ಕಾರ್ಯಾಚರಣೆ ನಿರ್ವಿಘ್ನವಾಗಿ ಪೂರ್ಣಗೊಂಡಿದೆ.

