ಶಿರಸಿ: ತಾಲೂಕಿನ ಔಡಾಳ ಗ್ರಾಮದ ಮಾವಿನಜಡ್ಡಿ ಮಜರೆಯ ಕಟ್ಲಗುಂಡಿ ಹತ್ತಿರದ ಕಾಡಿನಲ್ಲಿ ಎರಡು ದಿನಗಳ ಹಿಂದೆ ಕಡವೆಯೊಂದು ಸತ್ತಿರುವುದು ಗ್ರಾಮಸ್ಥರು ಭೇಟಿ ನೀಡಿದ ವೇಳೆ ಗಮನಕ್ಕೆ ಬಂದಿದೆ.
ಗ್ರಾಮಸ್ಥರಿಂದ ಮಾಹಿತಿ ತಿಳಿದ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಡವೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಆದರೆ ಕಡವೆ ಸಾವಿಗೆ ಕಾಡು ಪ್ರಾಣಿ ಬೇಟೆಗಾರರೇ ಕಾರಣ ಎನ್ನುವ ಶಂಕೆ ಗ್ರಾಮಸ್ಥರಿಂದ ವ್ಯಕ್ತವಾಗಿದೆ.
ಈ ಹಿನ್ನಲೆ ಅಧಿಕಾರಿಗಳು ಬೇಟೆಗಾರರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.


