ಭಟ್ಕಳ: ತಾಲೂಕಿನ ಮುರುಡೇಶ್ವರ ಬೀಚ್‌ನಲ್ಲಿ ಭಾರೀ ಅಲೆಯ ಅಬ್ಬರಕ್ಕೆ ಬಾಲಕನೊಬ್ಬ ಸಿಲುಕಿಕೊಂಡು ಮೃತಪಟ್ಟ ದುರ್ಘಟನೆ ಸೋಮವಾರ ಸಂಭವಿಸಿದೆ.
ಈ ಘಟನೆಯಲ್ಲಿ ಬೆಂಗಳೂರಿನ ಬಿದರಳ್ಳಿ ನಿವಾಸಿ ಕೃತಿಕ್ (8), ತಮ್ಮ ಕುಟುಂಬ ಸಮೇತ ಭೇಟಿ ನೀಡಿದ್ದ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಬೆಂಗಳೂರು ಬಿದರಳ್ಳಿ ನಿವಾಸಿ ಕೆ. ರವಿ ರೆಡ್ಡಿ ಅವರ ಕುಟುಂಬ ರವಿವಾರ ರಾತ್ರಿ ಮುರುಡೇಶ್ವರಕ್ಕೆ ಬಂದು ತಂಗಿದ್ದರು. ಸೋಮವಾರ ದೇವಸ್ಥಾನದ ಎಡಬದಿಯ ಕಡಲ ತೀರದಲ್ಲಿ ಮಕ್ಕಳು ಆಡುತ್ತಿದ್ದಾಗ ಭಾರೀ ಅಲೆ ಅಪ್ಪಳಿಸಿದೆ. ಈ ವೇಳೆ ಕುಟುಂಬದ ಮೂವರು ಸದಸ್ಯರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ. ಆದರೆ ಕೃತಿಕ್, ಉಳಿಯಲಾಗಲಿಲ್ಲ.
ಅಲೆಗೆ ಸಿಲುಕಿದ 27 ವರ್ಷದ ವಸಂತಾ ಕೆ. ಅಸ್ವಸ್ಥರಾಗಿದ್ದು, ಅವರನ್ನು ತಕ್ಷಣ ಆರ್.ಎನ್.ಎಸ್. ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.


