ಕರಾವಳಿ ವಾಯ್ಸ್ ನ್ಯೂಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾ ಬಿಡುಗಡೆಯಾದರೆ ಅದು ಕನ್ನಡ ಚಿತ್ರರಂಗಕ್ಕೆ ಹಬ್ಬದ ಸಂಭ್ರಮದಂತೆಯೇ. ಗುರುವಾರ ತೆರೆಕಂಡ ದಿ ಡೆವಿಲ್ ಕೂಡ ಬಿಡುಗಡೆಯ ಮೊದಲ ದಿನದಲ್ಲೇ ಭಾರೀ ಪ್ರೇಕ್ಷಕ ಬೆಂಬಲ ಪಡೆದು ಚಿತ್ರಮಂದಿರಗಳನ್ನು ತುಂಬಿಸುವಲ್ಲಿ ಯಶಸ್ವಿಯಾಗಿದೆ. ಇದರ ಫಲವಾಗಿ ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನವೇ ದಾಖಲೆಯ ಕಲೆಕ್ಷನ್ ಸಾಧಿಸಿದೆ.

ಮೂಲಗಳ ಪ್ರಕಾರ ದಿ ಡೆವಿಲ್ ಮೊದಲ ದಿನದ ಬಾಕ್ಸಾಫೀಸ್ ಕಲೆಕ್ಷನ್ 13.8ಕೋಟಿ ಎನ್ನಲಾಗಿದೆ.

ಕನ್ನಡದ ಸಿನಿಮಾಗಳ ಪಾಲಿಗೆ ಒಂದೇ ದಿನಕ್ಕೆ 13 ಕೋಟಿ ರೂಪಾಯಿ ಗಳಿಕೆ ಮಾಡಿರುವುದು ದಾಖಲೆಯ ವಿಷಯವೇ ಸರಿ. ಒಂದು ರೀತಿಯಲ್ಲಿ ಇದಕ್ಕೆ ಟಿಕೆಟ್ ಬೆಲೆ ಕೂಡ ಕಾರಣ ಎನ್ನಬಹುದು. ಪಿವಿಆರ್, ಐನಾಕ್ಸ್​​ ಮೊದಲಾದ ಮಲ್ಟಿಪ್ಲೆಕ್ಸ್​ ಚಿತ್ರ ಮಂದಿರಗಳಲ್ಲಿ ಟಿಕೆಟ್ ದರ 500 ರೂಪಾಯಿಗಳಿಂದಲೇ ಆರಂಭ ಎನ್ನುವ ಹಾಗಿತ್ತು. ಸಿಂಗಲ್ ಥೀಯೇಟರ್ ಗಳಲ್ಲಿ 400 ರೂಪಾಯಿ ವರೆಗೂ ಟಿಕೆಟ್ ದರ ಇತ್ತು. ಇದರಿಂದಾಗಿಯೇ ದೊಡ್ಡ ಮಟ್ಟದ ಕಲೆಕ್ಷನ್ ಆಗಿದೆ ಎನ್ನಲಾಗುತ್ತಿದೆ.

ಪ್ಯಾನ್ ಇಂಡಿಯನ್ ಸಿನಿಮಾಗಳ ಸಿನಿಮಾ ಬಗ್ಗೆ ಕರ್ನಾಟಕ ಮಾತ್ರವಲ್ಲ ಇಡೀ ದೇಶವೇ ನಿರೀಕ್ಷೆ ಮಾಡಿತ್ತು. ಆದರೆ ಚಿತ್ರ ಕರ್ನಾಟಕದಲ್ಲಿ ದಾಖಲೆಯ ಸನಿಹಕ್ಕೆ ‘ಡೆವಿಲ್’ ಚಿತ್ರ ಬಂದು ಸೇರುತ್ತಿದೆ. ಆದರೆ ದರ್ಶನ್ ಅವರ ಹಿಂದಿನ ದಾಖಲೆಯ ಕಲೆಕ್ಷನ್ ಆಗಿರುವ ರಾಬರ್ಟ್ ಚಿತ್ರದ ಮೊದಲ ದಿನದ ಗಳಿಕೆಯನ್ನು ಮುರಿದಿದೆ ಹೀಗಾಗಿ ದರ್ಶನ್ ಹೆಸರಲ್ಲಿ ಡೆವಿಲ್ ಹೊಸ ದಾಖಲೆ ಬರೆದಿದೆ.

Please Share: