ಕರಾವಳಿ ವಾಯ್ಸ್ ನ್ಯೂಸ್
ದಾಂಡೇಲಿ: ನಗರದ ಹಳಿಯಾಳ ರಸ್ತೆ ಅಲೈಡ್ ಏರಿಯಾ ಮತ್ತು 3ನೇ ಗೇಟ್ ಹತ್ತಿರ ಗುರುವಾರ ಅಪರೂಪದ ಘಟನೆ ನಡೆದಿದ್ದು, ಗಟಾರದಲ್ಲಿ ಬೃಹತ್ ಮೊಸಳೆ ಕಾಣಿಸಿಕೊಂಡು ಸ್ಥಳೀಯರನ್ನು ಬೆಚ್ಚಿ ಬೀಳಿಸಿತು.
ಮೊಸಳೆ ದೃಶ್ಯ ಕಂಡು ಬಂದಾಗ ಪರಿಸರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಮಕ್ಕಳು, ಮಹಿಳೆಯರು ಸೇರಿದಂತೆ ಹಲವಾರು ನಿವಾಸಿಗಳು ಭಯದಿಂದ ಮನೆಗಳಿಂದ ಹೊರಬರಲು ಹಿಂಜರಿದರು.
ಈ ಸಂದರ್ಭದಲ್ಲಿ ಸ್ಥಳೀಯ ಯುವಕರು ಧೈರ್ಯ ತೋರಿಸಿ, ಮೊಸಳೆಯನ್ನು ಹಿಡಿದು ಯಾವುದೇ ಅಪಾಯವಿಲ್ಲದಂತೆ ಸುರಕ್ಷಿತವಾಗಿ ಕಾಳಿ ನದಿಗೆ ಬಿಡುಗಡೆ ಮಾಡುವಲ್ಲಿ ಯಶಸ್ವಿಯಾದರು.
ಘಟನೆಯ ಬಗ್ಗೆ ಅರಣ್ಯ ಇಲಾಖೆ ಕೂಡಲೇ ಮಾಹಿತಿ ನೀಡಲಾದರೂ, ಸಿಬ್ಬಂದಿ ಸ್ಥಳಕ್ಕೆ ತಲುಪದ ಕಾರಣ ಸ್ಥಳೀಯರು ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿರಂತರ ಮಳೆಯ ಪರಿಣಾಮವಾಗಿ ನದಿಗಳು–ನಾಲೆಗಳ ನೀರು ಏರಿಕೆಯಾಗುತ್ತಿದ್ದು, ಮೊಸಳೆಗಳು ವಸತಿ ಪ್ರದೇಶಗಳಿಗೆ ಪ್ರವೇಶಿಸುವ ಘಟನೆಗಳು ಹೆಚ್ಚುತ್ತಿದ್ದು, ಈ ಘಟನೆ ಕೂಡ ಅಂತಹ ಪರಿಸ್ಥಿತಿಯ ಭಾಗವೆಂದು ಊರುಮೂಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

